ಕುಂದಾಪುರ: ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಗ್ರಾಮೀಣ ಭಾಗದ ಜನರಿಗೆ ಹಾಗೂ ರೈತರಿಗೆ ವ್ಯವಹರಿಸಲು ಅನುಕೂಲಕರವಾದ ವಾತಾವರಣ ಕಲ್ಪಿಸಿದೆ ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿಸಂವಹನದ ಕೊರತೆಯುಂಟಾಗಿದ್ದು ಅದನ್ನು ನೀಗಿಸುವಲ್ಲಿ ಸಹಕಾರಿ ಸಂಘಗಳು ಪ್ರಮುಖ ಪಾತ್ರ ವಹಿಸಿದೆ ಎಂದು ಕುಂದಾಪುರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ನುಡಿದರು
ಅವರು ನಗರದ ಮುಖ್ಯರಸ್ತೆಯಲ್ಲಿರುವ ಪಾಲಿಜಾತ ಹೋಟೆಲ್ ಎದುರುಗಡೆಯ ವಿಕ್ರಂ ಸ್ಕ್ಯಾನಿಂಗ್ ಸೆಂಟರ್ ಇದರ ಮೊದಲ ಮಹಡಿಯಲ್ಲಿ ಶ್ರೀ ಮಹಾಲಕ್ಷ್ಮಿ ಪ್ರಾಥಮಿಕ ಸೇವಾ ಸಹಕಾರ ಸಂಘ ನಿಯಮಿತ ಇದರ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು
ಸಭಾಧ್ಯಕ್ಷತೆಯನ್ನು ಮಹಾಲಕ್ಷ್ಮಿ ಪ್ರಾಥಮಿಕ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾದ ಪ್ರಕಾಶ್ ಬೆಟ್ಟಿನ್ ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಂದಾಪುರ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಅರುಣ್ ಕುಮಾರ್ ಎಸ್ ವಿ ಅವರು ಭದ್ರತಾ ಕೋಶವನ್ನು ಉದ್ಘಾಟಿಸಿ ಮಾತನಾಡಿ ಕುಂದಾಪುರದ ಮಹಾಲಕ್ಷ್ಮಿ ಪ್ರಾಥಮಿಕ ಸೇವಾ ಸಹಕಾರಿ ಸಂಘವು ದೇಶದಲ್ಲೇ ಮಾದರಿ ಸಹಕಾರಿ ಸಂಘವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು
ವೇದಿಕೆಯಲ್ಲಿ ಸತೀಶ್ಚಂದ್ರ ಕಾಳಾವರ್ಕರ್ ಕಟ್ಟಡದ ಮಾಲಿಕರಾದ ವಿಕ್ರಮ್ ಸ್ಕ್ಯಾನಿಂಗ್ ಸೆಂಟರ್ನ ರಾಘವೇಂದ್ರ ಉಪಾಧ್ಯಾಯ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ನಾಗರಾಜ್ ನಾಯ್ಕ್ ಬಿ ವೆಂಕಟೇಶ ಸೇರುಗಾರ್ ರಾಜೇಶ್ ಕಾವೇರಿ ಶರತ್ ಕುಮಾರ್ ಕೆ ಸಿ ಚಂದ್ರಶೇಖರ್ ಬಿ ಎಂ ದಯಾನಂದ ಗಾಣಿಗಾ