ಕೋಟ : ಸತತ ಮೂವತ್ತು ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದ ಯಕ್ಷಗಾನವನ್ನು ನಡೆಸುತ್ತಾ ಬಂದಿರುವುದಲ್ಲದೇ ಸಾರ್ವಜನಿಕರಿಗೆ ಅನ್ನದಾನವನ್ನು ಪೂರೈಸಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಾಮ್ಯತೆಯನ್ನು ಸಾಧಿಸಿದವರು ಮಲ್ಯಾಡಿ ಶಿವರಾಮ ಶೆಟ್ಟಿ ಸಹೋದರರು. ಅತ್ಯಂತ ನಿಷ್ಠೆಯಿಂದ ಕ್ಷೇತ್ರದ ನಿಕಟ ಸಂಪರ್ಕದಿಂದಗಿ ತನ್ನೆಲ್ಲಾ ಅಭೀಷ್ಟೆಯನ್ನು ಪೂರೈಸಿಕೊಂಡಿದ್ದೇವೆ ಎನ್ನುವ ಶಿವರಾಮ ಶೆಟ್ಟಿಯವರ ಮನೋಭಿಲಾಷೆ ನಿಜಕ್ಕೂ ಮೆಚ್ಚುವಂತಹದ್ದು. ಮೇಳದ ಎಲ್ಲಾ ಕಲಾವಿದರಿಗೂ ನೆರವಾಗುತ್ತಾ ಅವಕಾಶಗಳನ್ನು ಸುದೃಢಗೊಳಿಸಿದ ಮಹನೀಯರು ಇಂದು ವಸಂತ ಗೌಡ ಕಾಯತ್ತಡ್ಕ ಇವರನ್ನು ಸಮ್ಮಾನಿಸಿರುವುದು ಶ್ಲಾಘನೀಯ ಎಂದು ಮೇಳದ ವ್ಯವಸ್ಥಾಪಕರಾದ ಗಿರೀಶ್ ಹೆಗ್ಡೆ ಧರ್ಮಸ್ಥಳ ಅಭಿನಂದನೀಯ ಮಾತುಗಳನ್ನಾಡಿದರು. ಮಲ್ಯಾಡಿ ಮಹಾದೇವಿ ದೇವಸ್ಥಾನದಲ್ಲಿ ಧರ್ಮಸ್ಥಳದ ಮೇಳದ ಶಿವರಾಮ ಶೆಟ್ಟಿ ಸಹೋದರರ ಧರ್ಮಸ್ಥಳ ಮೇಳದ 31ನೇ ಯಕ್ಷಗಾನದ ರಂಗದಲ್ಲಿ ಹಿರಿಯ ಕಲಾವಿದ ವಸಂತ ಗೌಡ ಕಾಯತ್ತಡ್ಕ ಇವರನ್ನು ಅಭಿನಂದಿಸಿ ಗಿರೀಶ್ ಹೆಗ್ಡೆ ಮಾತನ್ನಾಡಿದರು. ಗೌರವ ಉಪಸ್ಥಿತಿಯಲ್ಲಿ ತಲ್ಲೂರು ನಾರಾಯಣ ಶೆಟ್ಟಿ, ಮ್ಯಾನೇಜರ್ ಪುಷ್ಪರಾಜ್, ಆಡಳಿತ ಮಂಡಳಿ ಮುಖ್ಯಸ್ಥರಾದ ರಘುರಾಮ ಶೆಟ್ಟಿ, ಸದಾರಾಮ ಶೆಟ್ಟಿ, ಅರ್ಚಕ ಗಣಪತಿ ಅಡಿಗ ಉಪಸ್ಥಿತರಿದ್ದರು. ಮಲ್ಯಾಡಿ ಸೀತಾರಾಮ ಶೆಟ್ಟಿ ಗಣ್ಯರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಧರ್ಮಸ್ಥಳ ಮೇಳದವರಿಂದ ಪೌರಾಣಿಕ ಆಖ್ಯಾನ ರಂಗದಲ್ಲಿ ಪ್ರದರ್ಶನಗೊಂಡಿತು