Home » ಮನ್ ಕೀ ಬಾತ್ ವೀಕ್ಷಣೆಗೆ ಕರೆ
 

ಮನ್ ಕೀ ಬಾತ್ ವೀಕ್ಷಣೆಗೆ ಕರೆ

by Kundapur Xpress
Spread the love

ಉಡುಪಿ : ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಸೆ.17 ರಿಂದ ಅ.2 ಗಾಂಧಿ ಜಯಂತಿ ಆಚರಣೆಯ ವರೆಗೆ ವಿವಿಧ ಸೇವಾ ಚಟುವಟಿಕೆಗಳೊಂದಿಗೆ ನಡೆಯುತ್ತಿರುವ ಸೇವಾ ಪಾಕ್ಷಿಕ ಮತ್ತು ಬಿಜೆಪಿ ಸದಸ್ಯತಾ ಅಭಿಯಾನಕ್ಕೆ ವೇಗ ನೀಡುವ ಜೊತೆಗೆ ಸೆ.29ರಂದು ಬೆಳಿಗ್ಗೆ 11.00 ಗಂಟೆ ನಡೆಯುವ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮದ ನೇರ ಪ್ರಸಾರವನ್ನು ಪಕ್ಷದ ಪ್ರಮುಖರು,ಜಿಲ್ಲೆ, ಮಂಡಲ,ಮೋರ್ಚಾ,ಪ್ರಕೋಷ್ಠಗಳ ಸಹಿತ ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ವೀಕ್ಷಿಸಿ ತಮ್ಮ ಬೂತ್ ಸಂಖ್ಯೆಯೊಂದಿಗೆ ಫೋಟೋ ಮತ್ತು ವಿವರವನ್ನು ಸರಲ್ ಆಪ್ ನಲ್ಲಿ ಅಪ್ಲೋಡ್ ಮಾಡುವ ಮೂಲಕ ಉಡುಪಿ ಜಿಲ್ಲೆ ಈ ಎಲ್ಲಾ ಅಭಿಯಾನಗಳಲ್ಲಿ ರಾಜ್ಯದಲ್ಲೇ ಮುಂಚೂಣಿ ಸ್ಥಾನ ಪಡೆಯುವಂತೆ ಸಂಘಟಿತ ಶ್ರಮ ವಹಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಕರೆ ನೀಡಿದರು.ಅವರು ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯ ತಂಡದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸೇವಾ ಪಾಕ್ಷಿಕದ ಅಂಗವಾಗಿ ‘ತಾಯಿಯ ಹೆಸರಲ್ಲಿ ಒಂದು ಸಸಿ’ ನೆಡುವ ಅಭಿಯಾನದ ಜೊತೆಗೆ ಉದ್ಯಾನವನ,ಧಾರ್ಮಿಕ ಕೇಂದ್ರಗಳಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಬೇಕು.ಪಕ್ಷದ ಪ್ರಮುಖರು,ಜವಾಬ್ದಾರಿಯುತ ಪದಾಧಿಕಾರಿಗಳು,ಸಮಿತಿ ಸದಸ್ಯರು,ಎಲ್ಲಾ ಜನಪ್ರತಿನಿಧಿಗಳು,ಅಭಿಯಾನಗಳ ಪ್ರಭಾರಿಗಳು,ಸಂಚಾಲಕರು ಮತ್ತು ಕಾರ್ಯಕರ್ತರು ಮನೆಮನೆ ಭೇಟಿಯ ಮೂಲಕ ಸದಸ್ಯತಾ ಮಹಾ ಅಭಿಯಾನದಲ್ಲಿ ತೊಡಗಿಸಿಕೊಂಡು,ಸ್ವಯಂ 100 ಮೇಲ್ಪಟ್ಟು ಹಾಗೂ ಪ್ರತೀ ಬೂತ್ ನಲ್ಲಿ ಕನಿಷ್ಠ 300 ಸಂಖ್ಯೆಯ ಸದಸ್ಯತನವನ್ನು ನೊಂದಾಯಿಸುವ ಮೂಲಕ ಎಲ್ಲಾ ಅಭಿಯಾನಗಳನ್ನು ಯಶಸ್ವಿಗೊಳಿಸಬೇಕು ಎಂದರು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯಕುಮಾರ್ ಶೆಟ್ಟಿ ಮಾತನಾಡಿ ಸಂಘಟನಾತ್ಮಕವಾಗಿ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆ ಸದಸ್ಯತಾ ಅಭಿಯಾನ, ಮನ್ ಕೀ ಬಾತ್ ವೀಕ್ಷಣೆ ಮತ್ತು ವರದಿ ಅಪ್ಲೋಡ್ ಹಾಗೂ ಸೇವಾ ಪಾಕ್ಷಿಕ ಅಭಿಯಾನದಲ್ಲಿ ರಾಜ್ಯಕ್ಕೇ ಮಾದರಿಯಾಗಬೇಕು ಎಂದರು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಸದಸ್ಯತಾ ಅಭಿಯಾನದ ಜಿಲ್ಲಾ ಸಂಚಾಲಕ ಮಟ್ಟಾರ್ ರತ್ನಾಕರ ಹೆಗ್ದೆ ಮಾತನಾಡಿ ದೇಶವನ್ನು ವಿಶ್ವದ ಮುಂದುವರಿದ ರಾಷ್ಟ್ರಗಳಲ್ಲಿ 5 ನೇ ಸ್ಥಾನಕ್ಕೇರಿಸಿ ದೇಶವನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಆಡಳಿತಾವಧಿಯಲ್ಲಿ ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷ ಬಿಜೆಪಿಯ ಸದಸ್ಯತನವನ್ನು ಪಡೆಯುವುದು ಸುಯೋಗ.ಈ ನಿಟ್ಟಿನಲ್ಲಿ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸಂಘಟಿತ ಪ್ರಯತ್ನದಿಂದ ಗರಿಷ್ಠ ಸದಸ್ಯತನ ನೊಂದಾವಣೆ ಮೂಲಕ ಅಭಿಯಾನವನ್ನು ಅತ್ಯಂತ ಯಶಸ್ವಿಗೊಳಿಸಬೇಕು ಎಂದರು.

   

Related Articles

error: Content is protected !!