218
ಉಡುಪಿ : ರೈಲ್ವೆ ಖಾತೆ ಮತ್ತು ಜಲಶಕ್ತಿ ಸಚಿವ ವಿ. ಸೋಮಣ್ಣ ಜೂನ 13ರಂದು ಉಡುಪಿಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 12.00ಕ್ಕೆ ಇಂದ್ರಾಳಿಯ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ಮಾಡಲಿದ್ದು, 3 .00 ಗಂಟೆಗೆ ಕುಂದಾಪುರ ಮೂಡ್ಲಕಟ್ಟೆ ರೈಲ್ವೆ ನಿಲ್ದಾಣ ನಿಲ್ದಾಣಕ್ಕೆ ಭೇಟಿಯಿತ್ತು, ನವೀಕರಣಗೊಂಡ ಕುಂದಾಪುರ ರೈಲ್ವೇ ಸ್ಟೇಷನ್‌ನ ಪ್ಲಾಟ್ ಫಾರ್ಮ್, ನೂತನ ಛಾವಣಿ ಮತ್ತು ಗಾರ್ಡನ್ನ ಸುಂದರೀಕರಣ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ ಹಾಗೂ ಸಂಸದರು ಮತ್ತು ಶಾಸಕರೊಂದಿಗೆ ಚರ್ಚಿಸಲಿದ್ದಾರೆ ಎಂದು ಜಿಲ್ಲಾ ಬಿಜೆಪಿ ಪ್ರಕಟಣೆ ತಿಳಿಸಿದೆ

