ಕುಂದಾಪುರ : ಮಿತ್ರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಇದರ ವಾರ್ಷಿಕ ಸಾಮಾನ್ಯ ಸಭೆಯು ಕುಂದಾಪುರ ನಗರದ ಶ್ರೀ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಜರುಗಿತು
ಮಿತ್ರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಇದರ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಯು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘವು ಪ್ರಸಕ್ತ ಸಾಲಿನಲ್ಲಿ 59 ಕೋಟಿಗೂ ಹೆಚ್ಚು ವ್ಯವಹಾರ ನಡೆಸಿ 22,59,402.42 ರಷ್ಟು ಲಾಭ ಗಳಿಸಿದ್ದು ಲಾಭಾಂಶದಲ್ಲಿ ಸಂಘದ ಸದಸ್ಯರಿಗೆ ಶೇ.13 ಡಿವಿಡೆಂಡ್‌ನ್ನು ವಿತರಿಸಲಾಗುವುದು ಎಂದ ಅವರು ವರ್ಷಾಂತ್ಯದಲ್ಲಿ ಸಮೀಪದ ಬಸ್ರೂರಿನಲ್ಲಿ ನೂತನ ಶಾಖೆಯನ್ನು ತೆರೆಯಲಾಗುವುದು ಎಂದು ತಿಳಿಸಿದರು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಗೋಟ ವಾರ್ಷಿಕ ವರದಿಯನ್ನು ಮಂಡಿಸಿದರು.ಸಮಾರಂಭದಲ್ಲಿ ಸಂಘದ ಹಿರಿಯ ಸದಸ್ಯರಾದ ಕುಂದೇಶ್ವರ ದೇವಸ್ಥಾನದ ಮಾಜಿ ಮೊಕ್ತೇಸರರಾದ ಕೆ ಆರ್ ಉಮೇಶ್ ರಾವ್ ಕುಂದಾಪುರ ರಾಮಕ್ಷತ್ರಿಯರ ಸಂಘದ ಮಾಜಿ ಅಧ್ಯಕ್ಷರಾದ ರಮಾನಾಥ್ ನಾಯ್ಕ್ ಚಿಕ್ಕನಸಾಲ್ ರಸ್ತೆಯ ರಾಮಚಂದ್ರ ಕೋಟೆ ಬಸವ ಪೂಜಾರಿ ಪುಷ್ಫ ಹಾಗೂ ಕೆ ರಾಮಚಂದ್ರ ರಾವ್ ಇವರು ಸಂಘಕ್ಕೆ ನೀಡಿದ ಅನುಪಮ ಸೇವೆಗಾಗಿ ಗುರುತಿಸಿ ಸನ್ಮಾನಿಸಲಾಯಿತು ಹಿರಿಯ ಸದಸ್ಯರು ಗೌರವಕ್ಕೆ ಪಾತ್ರರಾದ ಕೆ ಆರ್ ಉಮೇಶ್ ರಾವ್ ರವರು ಮಾತನಾಡಿ ಸಂಘಕ್ಕೆ ಶುಭ ಹಾರೈಸಿ ಮುಂದೆಯೂ ಹಿರಿಯ ಸದಸ್ಯರ ಸನ್ಮಾನ ಕಾರ್ಯಕ್ರಮವವು ನಿರಂತರವಾಗಿ ಮುಂದುವರಿಯಲಿ ಎಂದು ಹಾರೈಸಿದರು
ವಿದ್ಯಾರ್ಥಿ ವೇತನ ಮತ್ತು ಸಹಾಯಧನ ವಿತರಣೆ
ಸಂಘದ ಸದಸ್ಯ ಮಕ್ಕಳಿಗೆ ದ್ವಿತೀಯ ಪಿಯುಸಿಯಲ್ಲಿ ಶೇಕಡ 90 ಕ್ಕಿಂತ ಹೆಚ್ಚಿನ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಾದ ಕೆ ಟಿ ಸಿಂಧು ಮೇಘನಾ ಎಂ ಅಂಶು ಕೆ ಹಾಗೂ ವಿಶ್ವಾಸ್ ಮತ್ತು ಎಸ್ ಎಸ್ ಎಲ್ ಸಿಯಲ್ಲಿ ಶೇಕಡ 97.60 ಅಂಕ ಪಡೆದ ಆಯುಷ್ ಮೆಂಡನ್ ಇವರನ್ನು ಸಂಘದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು
ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ರಾಧಾಕೃಷ್ಣ ಯು ಉಪಾಧ್ಯಕ್ಷರಾದ ರಮೇಶ್ ದೇವಾಡಿಗ ನಿರ್ಧೇಶಕರುಗಳಾದ ಶ್ರೀನಿವಾಸ್ ಎಚ್ ಜನಾರ್ಧನ್ ವಿಜಯ ಪೂಜಾರಿ ಸುರೇಂದ್ರ ಕೆ ರಾಜಶೇಖರ್ ಹೆಗ್ಡೆ ವಾಸುದೇವ ಹಂದೆ ಕೃಷ್ಣ ಪೂಜಾರಿ ಶ್ರೀಮತಿ ಶುಭವಾಣಿ ಹಾಗೂ ಶ್ರೀಮತಿ ಮಾಲತಿ ವಿಷ್ಣು ಉಪಸ್ಥಿತರಿದ್ದರು
ಸಂಘದ ಮುಖ್ಯ ಲೆಕ್ಕ ಪರಿಶೋಧಕರಾದ ಕೆ ಪದ್ಮನಾಭ ಕಾಂಚನ್‌ರವರನ್ನು ಈ ಸಂದರ್ಭದಲ್ಲಿ ಗುರುತಿಸಲಾಯಿತು ಗೋಪಾಲ ಪೂಜಾರಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಶ್ರೀಮತಿ ಭಾರತಿ ಪ್ರಾರ್ಥಿಸಿ ವರುಣ್ ಕುಮಾರ್ ವಂದಿಸಿದರು