ಬೈಂದೂರು : ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಜನುಮದಿನಕ್ಕೆ ಕಾರ್ಯಕರ್ತರೇ ಕ್ಷೇತ್ರದಾದ್ಯಂತ ಸಮೃದ್ಧ ಹಸಿರು ಕಾರ್ಯಕ್ರಮ ಆಯೋಜಿಸಿ ನೂರಾರು ಗಿಡಗಳನ್ನು ನೆಟ್ಟು ಪರಿಸರ ಸ್ನೇಹಿಯಾಗಿ ಕ್ಷೇತ್ರದ ಶಾಸಕರ ಜನುಮದಿನವನ್ನು ಆಚರಿಸಿ ಸಂಭ್ರಮಿಸಿದರು
ಅದಲ್ಲದೆ ಗುರುರಾಜ್ ಗಂಟಿಹೊಳೆ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ಕ್ಷೇತ್ರದ ಹಲವೆಡೆ ವಿಭಿನ್ನ ರೀತಿಯ ಸಮಾಜಮುಖಿ ಕೆಲಸಗಳನ್ನು ಮಾಡಿ ಮಾದರಿಯಾದರು
ಗುರುರಾಜ್ ಗಂಟಿಹೊಳೆ ಅಭಿಮಾನಿಗಳಿಂದ ಅವರ ಹುಟ್ಟುಹಬ್ಬದ ಪ್ರಯುಕ್ತ ರಕ್ತಧಾನ ಶಿಭಿರ, ಸ್ವಚ್ಛತಾ ಕಾರ್ಯಕ್ರಮ, ಗಿಡ ನೆಡುವ ಕಾರ್ಯಕ್ರಮ, ಅಸಾಯಕರಿಗೆ ನೆರವು, ವ್ರದ್ಧಾಶ್ರಮ, ಅನಾಥಶ್ರಮ ಗಳಿಗೆ ನೆರವು ನೀಡುವುದಲ್ಲದೆ ಹಳ್ಳಿಗಳಲ್ಲಿ ದುರಸ್ಥಿಯಲ್ಲಿರುವ ಮನೆಗಳನ್ನು ಸರಿಪಡಿಸಿಕೊಡುವ ಕಾರ್ಯಕ್ರಮ, ಹಾಗೂ
ಸರ್ಕಾರಿ ಶಾಲೆಗಳ ಮೇಲ್ಚಾವಣಿ ಸರಿದೂಗಿಸುವ ಕಾರ್ಯಗಳನ್ನೆಲ್ಲಾ ಮಾಡಿ ಒಬ್ಬ ಶಾಸಕನ ಹುಟ್ಟುಹಬ್ಬವನ್ನು ಈ ರೀತಿ ಸಮಾಜಮುಖಿಯಾಗಿ ಆಚರಿಸಬಹುದು ಎನ್ನುವುದನ್ನು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅಭಿಮಾನಿಗಳು ಇಡೀ ಕ್ಷೇತ್ರದ ಮೂಲೆ ಮೂಲೆಗಳಲ್ಲಿ ತೋರಿಕೊಟ್ಟು ಮಾದರಿಯಾದರು


