109
ಕುಂದಾಪುರ : ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಡ್ಯಾಡಿ- ಮತ್ಯಾಡಿ ಮತ್ತು ಹೆಸ್ಕತೂರು ಗ್ರಾಮಗಳ ಸುತ್ತಮುತ್ತಲಿನ ಪರಿಸರದ ಜನರ ನೀರಿಗಾಗಿ ಬೇಡಿಕೆಗೆ ಸಂಭಂಧಿಸಿದಂತೆ ಕುಂದಾಪುರದ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಸಂಬಂಧಪಟ್ಟ ಇಂಜಿನಿಯರ್ ಹಾಗೂ ಗುತ್ತಿಗೆದಾರರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು
ಅವರು ಯಡ್ಯಾಡಿ- ಮತ್ಯಾಡಿ ಮತ್ತು ಹೆಸ್ಕತೂರು ಗ್ರಾಮಗಳ ಸುಮಾರು 330 ಹೆಕ್ಟೇರ ಕೃಷಿ ಭೂಮಿಗೆ ನೀರು ಒದಗಿಸುವ ವಾರಾಹಿ ಎಡದಂಡೆ ನಾಲೆಯ ವಿತರಣನಾಲೆ 31 ರಲ್ಲಿ ನೀರು ಹರಿಸುವ ಕೆಲಸವನ್ನುಶಾಸಕರು ನೆರವೇರಿಸಿದರು.
ಈ ಸಂದರ್ಭದಲ್ಲಿ ಸಂಬಂಧಪಟ್ಟ ಇಂಜಿನಿಯರ್ ಹಾಗೂ ಗುತ್ತಿಗೆದಾರರು, ಪಂಚಾಯಿತಿನ ಸದಸ್ಯರು, ಗ್ರಾಮಸ್ಥರು ಸ್ಥಳದಲ್ಲಿ ಉಪಸ್ಥಿತರಿದ್ದರು

