ಕುಂದಾಪುರ :ಪುರಸಭೆ, ಪಟ್ಟಣ ಪಂಚಾಯತ್ ಹಾಗೂ ನಗರ ಯೋಜನಾ ಪ್ರಾಧಿಕಾರದ ಅಧಿಕಾರಿಗಳ ಸಭೆಯು ಶಾಸಕರ ಕಚೇರಿಯಲ್ಲಿ ನಡೆಯಿತು ಕಾನೂನು ಪ್ರಕಾರ ಮಾಡಬೇಕಾದ ಕೆಲಸಗಳಿಗೆ ಅನಗತ್ಯ ನೆಪಗಳನ್ನು ಹುಡುಕಬಾರದು, ವಿನಾಕಾರಣ ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು, ಅವರನ್ನ ಸತಾಯಿಸಬಾರದು ಕಾನೂನು ಮೀರಿ ಕೆಲಸ ಕಾರ್ಯಗಳನ್ನು ನಡೆಸಿ ಎನ್ನುವುದಿಲ್ಲ, ಆದರೆ ಕಾನೂನಿನಲ್ಲಿ ಇರುವ ಅವಕಾಶಗಳನ್ನು ಬಳಸಿ ಸಾರ್ವಜನಿಕರಿಗೆ ಮಾಹಿತಿ ನೀಡಿ ಎಂದು ಶಾಸಕರಾದ ಕಿರಣ್ ಕುಮಾರ್ ಕೊಡ್ಗಿಯವರು ಅಧಿಕಾರಿಗಳಿಗೆ ಸೂಚಿಸಿದರು ಯೋಜನಾ ಪ್ರಾಧಿಕಾರದಲ್ಲಿ ಬಾಕಿ ಇರುವ ಕಡತಗಳ ಕುರಿತು ಮಾಹಿತಿ ಪಡೆದ ಶಾಸಕರು ಕಡತ ವಿಲೇ ಪ್ರಕ್ರಿಯೆ ಶೀಘ್ರದಲ್ಲಿ ನಡೆಯಬೇಕು ಸಾರ್ವಜನಿಕರಿಂದ ಕಡತಗಳ ಬಾಕಿ ಕುರಿತು ದೂರುಗಳು ಬರುತ್ತಿವೆ ಎಂದರು.ಸಭೆಯಲ್ಲಿ ಯೋಜನಾ ಪ್ರಾಧಿಕಾರದ ಅಧಿಕಾರಿಗಳಾದ ರಮ್ಯಾ, ಸಚಿನ್, ಪುರಸಭೆಯ ಮುಖ್ಯ ಅಧಿಕಾರಿ ಮಂಜುನಾಥ್ ಆರ್. ಕಂದಾಯ ಅಧಿಕಾರಿ ಅಂಜನಿ,ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಶಿವ ನಾಯ್ಕ್ ಉಪಸ್ಥಿತರಿದ್ದರು