102
ಕುಂದಾಪುರ : ಕುಂದಾಪುರ ನಗರದ ಹೃದಯ ಭಾಗದಲ್ಲಿ ನೆಲೆಸಿರುವ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ರಾಮಕ್ಷತ್ರಿಯ ಯುವಕ ಮಂಡಲ ರಾಮಕ್ಷತ್ರಿಯರ ಸಂಘ ಇವರ ಅದ್ದೂರಿಯ 60 ನೇ ವರ್ಷದ ಗಣೇಶೋತ್ಸವ ಸಂಭ್ರಮಾಚರಣೆಯ ಧಾರ್ಮಿಕ ಕಾರ್ಯಕ್ರಮಕ್ಕೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಭೇಟಿ ನೀಡಿ ದೇವರ ಆಶೀರ್ವಾದವನ್ನು ಪಡೆದರು. ರಾಮಕ್ಷತ್ರಿಯ ಯುವಕ ಮಂಡಲದ ಪದಾಧಿಕಾರಿಗಳು ಶಾಸಕರನ್ನು ಗೌರವಿಸಿಕೊಂಡರು.
ಈ ಸಂದರ್ಭದಲ್ಲಿ ರಾಮಕ್ಷತ್ರಿಯ ಯುವಕ ಮಂಡಲದ ಅಧ್ಯಕ್ಷರಾದ ರಾಜೇಶ್ ರಾವ್ ಹಾಗೂ ಲಕ್ಷ್ಮೀಶ್ ಹವಾಲ್ದಾರ ಸುಧೀರ್.ಕೆ.ಎಸ್, ರಾಜೇಶ್ ಕಾವೇರಿ ಅರುಣ್ ಬಾಣ, ರತ್ನಾಕರ ಶೇರಿಗಾರ್, ಮತ್ತು ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

