Home » ಪರಿಶ್ರಮದಿಂದ ಪ್ರತಿಭೆ ಅನಾವರಣ : ಶ್ರೀರಮಣ ಉಪಾಧ್ಯಾಯ
 

ಪರಿಶ್ರಮದಿಂದ ಪ್ರತಿಭೆ ಅನಾವರಣ : ಶ್ರೀರಮಣ ಉಪಾಧ್ಯಾಯ

by Kundapur Xpress
Spread the love

ಕೋಟ : ಪ್ರತಿಭೆ ಅನಾವರಣಗೊಳ್ಳಲು ಆತ್ಮ ವಿಶ್ವಾಸವೇ ಕಾರಣವಾಗಿದೆ ನಾವು ಗೈಯುವ ಪ್ರತಿ ಕಾರ್ಯದ ಹಿಂದೆ ದೇವರ ಶಕ್ತಿ ಅಡಗಿದೆ ಈ ಹಿನ್ನಲೆಯಲ್ಲಿ ಸುಶ್ಮಿತಾ ಬಹುಮುಖ ಪ್ರತಿಭೆಯಾಗಿ ಮೂಡಿಬರಲು ಸಾಧ್ಯವಾಗಿದೆ ಎಂದು ಕುಂಭಾಶಿಯ ಆನೆಗುಡ್ಡೆ ಶ್ರೀ ವಿನಾಯಕ ದೇಗುಲದ ಅನುವಂಶಿಕ ಆಡಳಿತ ಮುಕ್ತೇಸರ ಶ್ರೀರಮಣ ಉಪಾಧ್ಯಾಯ ಹೇಳಿದರು.

 ಆನೆಗುಡ್ಡೆ ದೇಗುಲದಲ್ಲಿ ಕಲಾವಿಸ್ಮಯ ಕಲಾತಂಡದ ಸಂಸ್ಥಾಪಕಿ, ಡಾ. ಶಿವರಾಮ ಕಾರಂತ ಸಾಧನಶ್ರೀ  ಪುರಸ್ಕ್ರತೆ ಸುಶ್ಮಿತಾ ಸಾಲಿಗ್ರಾಮ ಇವರ ಸಾಹಿತ್ಯ ಹಾಗೂ ಸಂಯೋಜನೆಯಲ್ಲಿ, ಕೀರ್ತನ್ ಪೂಜಾರಿ ಅವರು ಹಾಡಿರುವ ಶರಣೆಂಬೆ ವಿನಾಯಕ ಕನ್ನಡ ಭಕ್ತಿಗೀತೆಯ ಆಡಿಯೋವನ್ನು ಲೋಕಾಪರ್ಣೆಗೊಳಿಸಿ ಮಾತನಾಡಿದ ಅವರು ತನ್ನ ಕಾರ್ಯಕ್ಷೇತ್ರದಲ್ಲಿ ಶ್ರದ್ಧೆ ಇದ್ದರೆ ಪ್ರತಿ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ ಎಂದರಲ್ಲದೆ ಸುಶ್ಮಿತಾ ಬಹುಮುಖ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲಿ ಎಂದು ಹಾರೈಸಿದರು.

ಗೀತೆಯ ಸಾಹಿತ್ಯ ಮತ್ತು ಸಂಯೋಜನೆ ಸುಶ್ಮಿತಾ ಸಾಲಿಗ್ರಾಮ ಕಾರ್ಯಕ್ರಮ ಸಂಯೋಜಿಸಿ , ಸ್ವಾಗತಿಸಿದರು ಇದೇ ವೇಳೆ  ಕಲಾವಿಸ್ಮಯ ಯೂಟ್ಯೂಬ್ ಚಾನೆಲ್ ಮೂಲಕ ಭಕ್ತಿಗೀತೆಯ ಪೋಸ್ಟರ್‌ನ್ನು ಅನಾವರಣಗೊಳಿಸಲಾಯಿತು.

ಸುಶ್ಮಿತಾ ಇವರ ಪೋಷಕರಾದ ಕೃಷ್ಣಮೂರ್ತಿ ಮರಕಾಲ , ಪಂಚವರ್ಣ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ,ಜ್ಞಾನಭಾರತಿ ವಿದ್ಯಾಸಂಸ್ಥೆ ಕುಂದಾಪುರ ಇದರ ಪ್ರಾಂಶುಪಾಲ ರಾಘವೇಂದ್ರ ಗೋಪಾಡಿ, ಜ್ಞಾನಭಾರತಿ ಫ್ಯಾಷನ್ ಡಿಸೈನಿಂಗ್ ಮುಖ್ಯಸ್ಥರಾದ ಪದ್ಮಿನಿ, ಸ್ಥಳೀಯರಾದ ರಾಘವೇಂದ್ರ ಕಾಂಚನ್ ,ಆಡಿಯೋಗೆ ಸಹಕಾರ ನೀಡಿದ ಪ್ರಶಾಂತ್ ಡಿಸೋಜಾ,ವಿನಾಯಕ ಅಡಿಗ, ಶನೋಲ್, ನಾಗರಾಜ್ ಭಟ್ ಇದ್ದರು.

ಕಾರ್ಯಕ್ರಮವನ್ನು ಪತ್ರಕರ್ತ ರವೀಂದ್ರ ಕೋಟ ನಿರೂಪಿಸಿದರು.

ಗಾಯನ ರೆಕಾರ್ಡಿಂಗ್ ಮಿಕ್ಸಿಂಗ್ ಮಾಸ್ಟರಿಂಗ ಕೀರ್ತನ್ ಪೂಜಾರಿ,ಸಂಗೀತ ನಿರ್ವಹಣೆಯನ್ನು ಅಜೇಶ್ ಎಂ.ಸಿ. ಸಹಕರಿಸಿದರು.

 

Related Articles

error: Content is protected !!