ರಾಯ್ಪುರ : ಸ್ವಾತಂತ್ರೋತ್ತರದ ಅನೇಕ ದಶಕಗಳಲ್ಲಿ ಆಡಳಿತ ನಡೆಸಿದ್ದ ಕಾಂಗ್ರೆಸ್, ತನ್ನ ಅಧಿಕಾರದುದ್ದಕ್ಕೂ ಭ್ರಷ್ಟಾಚಾರವನ್ನೇ ಉಸಿರಾಗಿಸಿಕೊಂಡಿದ್ದರಿಂದ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರವೇ ಭಾರತದ ಗುರುತಾಗುವಂತಾಗಿತ್ತು. ಭ್ರಷ್ಟಾಚಾರವೇ ಕಾಂಗ್ರೆಸಿನ ನೀತಿಯಾಗಿದ್ದರಿಂದ ಅದಕ್ಕೆ ಬಡವರ ನೋವನ್ನೆಂದೂ ಅರ್ಥ ಮಾಡಿಕೊಳ್ಳಲಾಗಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಖೇದದಿಂದ ಹೇಳಿದ್ದಾರೆ.
ಛತ್ತೀಸ್ಗಢದ ಬಸ್ತಾರ್ ಜಿಲ್ಲೆಯಲ್ಲಿ ರ್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಲೋಕಸಭಾ ಚುನಾವಣೆಗೆ ಸಿದ್ದಪಡಿಸಿದ ಪ್ರಣಾಳಿಕೆ ಮುಸ್ಲಿಂ ಲೀಗಿನ ಅಚ್ಚಿನಂತಿದೆ ಎಂದರು. ಈ ಮೂಲಕ ಕಾಂಗ್ರೆಸ್ನ ತುಷ್ಟಿಕರಣ ನೀತಿ ಹಾಗೂ ಬಹುಸಂಖ್ಯಾತ ವಿರೋಧಿ ನಿಲುವು ಅದರ ಪ್ರಣಾಳಿಕೆಯಲ್ಲಿ ಎದ್ದು ಕಾಣುತ್ತಿರುವುದನ್ನು ಬೊಟ್ಟು ಮಾಡಿದರು