ನವದೆಹಲಿ : 370ನೇ ವಿಧಿ ರದ್ದು ಮಾಡಿದ್ದೇವೆ, 370 ಸೀಟು ಗೆಲ್ಲಬೇಕು ಪ್ರತೀ ಬೂತ್ನಲ್ಲೂ ಕನಿಷ್ಠ 370 ಮತ ಹೆಚ್ಚು ಗಳಿಸಬೇಕು ಕಮಲವೇ ಅಭ್ಯರ್ಥಿ ಅದನ್ನು ಗೆಲ್ಲಿಸಲು ಶ್ರಮಿಸಿ ಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಏಕಾಂಗಿಯಾಗಿ 370 ಸ್ಥಾನ ಗೆಲ್ಲುವುದು ಪಕ್ಷದ ಸಂಸ್ಥಾಪಕರಾದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರಿಗೆ ನಾವು ಸಲ್ಲಿಸುವ ಗೌರವವಾಗಲಿದೆ. ಈ ನಿಟ್ಟಿನಲ್ಲಿ ಪಕ್ಷದ ಪ್ರತಿ ನಾಯಕರೂ ಕಾರ್ಯಕರ್ತರೂ ಶ್ರಮಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಅಲ್ಲದೆ ಗೆಲುವಿನ ಸಂಬಂಧ 370, 370, 370 ಎಂಬ ಹೊಸ ಮಂತ್ರವನ್ನೂ ಜಪಿಸಿದ್ದಾರೆ. ನಮ್ಮ ಸರ್ಕಾರ ಕೈಗೊಂಡಿರುವ ಬಡವರ ಪರ ಕಾರ್ಯಕ್ರಮಗಳು, ದೇಶದ ಅಭಿವೃದ್ಧಿಯ ಸಾಧನೆ ಮತ್ತು ಜಾಗತಿಕ ಮಟ್ಟದಲ್ಲಿ ಭಾರತದ ಗೌರವ ಮತ್ತಷ್ಟು ಹೆಚ್ಚಿರುವ ವಿಷಯಗಳನ್ನು ಚುನಾವಣಾ ಪ್ರಚಾರದ ವಿಷಯವಾಗಿ ಕಾರ್ಯಕರ್ತರು ಬಳಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ ಅವರು ಬಿಜೆಪಿ ರಾಷ್ಟ್ರೀಯ ಮಂಡಳಿಯ ಸಮಾವೇಶದಲ್ಲಿ ಮಾತನಾಡಿದರು
ಸಮಾವೇಶಕ್ಕೆ ಆಗಮಿಸುತ್ತಿರುವ ಬಿ ಎಸ್ ಯಡಿಯೂರಪ್ಪ