ತೆಲಂಗಾಣ : ‘ಮೇರಾ ಭಾರತ್, ಮೇರಾ ಪರಿವಾರ್”, ಇಡೀ ಭಾರತವೇ ನನ್ನ ಕುಟುಂಬ ಮತ್ತು ನನ್ನ ಜೀವನವು ತೆರೆದ ಪುಸ್ತಕವಿದ್ದಂತೆ. ಈ ವಾಸ್ತವವು ದೇಶದ ಜನತೆಗೆ ಸ್ಪಷ್ಟವಾಗಿ ಗೊತ್ತಿದೆ ಎಂದು ಪ್ರಧಾನಿ ಮೋದಿ ವಿಪಕ್ಷೀಯರನ್ನು ತರಾಟೆಗೆತ್ತಿಕೊಂಡಿದ್ದಾರೆ. ದೇಶದ ಜನರ ಸೇವೆಗೆ ನನ್ನ ಬದುಕು ಮೀಸಲು. ದೇಶವಾಸಿಗಳ ಸೇವೆಯ ಕನಸಿನೊಂದಿಗೆ ತೀರಾ ಎಳೆ ಪ್ರಾಯದಲ್ಲೇ ನಾನು ಮನೆ ಬಿಟ್ಟವನು. ಜನರ ಸೇವಕನ ನೆಲೆಯಲ್ಲಿ ನನ್ನ ಬದುಕನ್ನು ಜನಕಲ್ಯಾಣಕ್ಕಾಗಿ ಸಮರ್ಪಿಸಿರುವೆ. ನನಗೆ ಕುಟುಂಬವಿಲ್ಲ ವೆಂಬುದು ವಿಪಕ್ಷೀಯರ ಕೊರಗು. ಆದರೆ ವಾಸ್ತವದಲ್ಲಿ ದೇಶದ 140 ಕೋಟಿ ಜನತೆಯೇ ನನ್ನ ತುಂಬು ಕುಟುಂಬ ಎಂಬುದನ್ನು ವಿಪಕ್ಷೀಯರು ಇನ್ನಾದರೂ ಅರಿತುಕೊಳ್ಳಲಿ ಎಂದು ಮೋದಿ ನುಡಿದಿದ್ದಾರೆ