ಉಡುಪಿ : ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನವೆಂಬರ್ 28 ರಂದು ಶ್ರೀ ಕೃಷ್ಣ ಮಠದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ, ಉಡುಪಿ ನಗರದಲ್ಲಿ ದೊಡ್ಡ ಮಟ್ಟದ ಸಂಚಾರ ತಿರುಗುಬಾಣಗಳನ್ನು ಜಾರಿಗೊಳಿಸಲಾಗಿದೆ. ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕಾಗಿ ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅವರು ಕೇಂದ್ರ ಮೋಟಾರು ವಾಹನ ಕಾಯ್ದೆ ಮತ್ತು ನಿಯಮಾವಳಿಗಳ ಪ್ರಕಾರ ಈ ಆದೇಶ ಹೊರಡಿಸಿದ್ದಾರೆ.
ನವೆಂಬರ್ 28ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಉಡುಪಿಯ ಹಲವಾರು ಮುಖ್ಯ ರಸ್ತೆಗಳಲ್ಲಿನ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಕಾರ್ಯಕ್ರಮಕ್ಕೆ ಬರುವ ವಾಹನಗಳು:
ಕುಂದಾಪುರದಿಂದ ಬರುವ ವಾಹನಗಳು ಸಿಲಾಸ್ ಶಾಲೆಯ ಪಾರ್ಕಿಂಗ್ ನಲ್ಲಿ ನಿಲ್ಲಬೇಕು.
ಜನರನ್ನು ಗುಂಡಿಬೈಲು ಬಳಿ ಇಳಿಸಿ, ಯು-ಟರ್ನ್ ಆಗಿ ಎಂಜಿಎಂ ಮೈದಾನ ಕಡೆಗೆ ಸಾಗಬೇಕು.
ಕಾರ್ಕಳ–ಬೆಳ್ವೆ ಮಾರ್ಗದಿಂದ ಬರುವ ವಾಹನಗಳು ಕ್ರಿಶ್ಚಿಯನ್ ಹೈಸ್ಕೂಲ್, ಪಿಯು ಕಾಲೇಜ್ ಮತ್ತು ಬೈಲೂರು ಮುದ್ದಣ ಎಸ್ಟೇಟ್ ನಲ್ಲಿ ಪಾರ್ಕ್ ಮಾಡಬೇಕು.
ಮಂಗಳೂರು ಹಾಗೂ ಮಲ್ಪೆ ಕಡೆಯಿಂದ ರೋಡ್‌ಶೋ ಗಾಗಿ ಬರುವ ವಾಹನಗಳು ಕ್ರಮವಾಗಿ ಬೈಲೂರು ಮುದ್ದಣ ಎಸ್ಟೇಟ್ ಮತ್ತು ಶಾಮೀಲಿ ಗ್ರೌಂಡ್ ನಲ್ಲಿ ಪಾರ್ಕಿಂಗ್ ಮಾಡಬೇಕು.
ಹೇಬ್ರಿ–ಕಾರ್ಕಳ ಕಡೆಯಿಂದ ಬರುವವರು ಶಾರದಾ ಕಲ್ಯಾಣ ಮಂಟಪ, ಬೀಡಿನಗುಡ್ಡೆ ಬಳಿ ಪಾರ್ಕ್ ಮಾಡಬೇಕು.
ಬಸ್‌ಗಳು ಮತ್ತು ಸಾಮಾನ್ಯ ವಾಹನಗಳು:
ಕೆಎಸ್‌ಆರ್‌ಟಿಸಿ ಹಾಗೂ ಪ್ರೈವೇಟ್ ಬಸ್‌ಗಳು ಉಡುಪಿ ಬಸ್‌ಸ್ಟ್ಯಾಂಡ್‌ಗೆ ಪ್ರವೇಶಿಸಲು ಅವಕಾಶವಿಲ್ಲ.
ಅವುಗಳು ಅಂಬಾಗಿಲು–ಮಣಿಪಾಲ–ಅಲೆವೂರು–ಕೊರಂಗ್ರಪಾಡಿ ಮಾರ್ಗವಾಗಿ ಸಂಚರಿಸಬೇಕು.
ಮಲ್ಪೆ, ಕುಂದಾಪುರ ಹಾಗೂ ಮಂಗಳೂರು ನಡುವೆ ಸಂಚರಿಸುವ ವಾಹನಗಳಿಗೆ ಪಡುಕೆರೆ, ಸಂತೆಕಟ್ಟೆ, ನೇಜಾರು, ದೆಂದೂರಕಟ್ಟೆ, ಪೆರಂಪಳ್ಳಿ, ಅಂಬಾಗಿಲು NH 66 ಮುಂತಾದ ಮಾರ್ಗಗಳನ್ನು ಕಡ್ಡಾಯವಾಗಿ ಬಳಸುವಂತೆ ಜಿಲ್ಲಾಡಳಿತ ಸೂಚಿಸಿದೆ.
ಮುಖ್ಯವಾಗಿ ಬೆಳಗ್ಗೆ 7 ರಿಂದ ಮಧ್ಯಾಹ್ನ 3ರ ತನಕ, ಕರಾವಳಿ ಭಾಗದಿಂದ ಉಡುಪಿ ಸಿಟಿ ಬಸ್ ನಿಲ್ದಾಣ ಅಥವಾ ಉಡುಪಿ ನಗರಕ್ಕೆ ಯಾವುದೇ ವಾಹನಗಳು ಪ್ರವೇಶಿಸಲು ಅನುಮತಿ ಇರುವುದಿಲ್ಲ.
ಜನತೆ ಸಂಚಾರ ತಿರುಗುಬಾಣಗಳನ್ನು ಪಾಲಿಸಿ, ಪ್ರಧಾನ ಮಂತ್ರಿ ಅವರ ಭೇಟಿ ಸಮಯದಲ್ಲಿ ಸಹಕರಿಸುವಂತೆ ಜಿಲ್ಲಾಡಳಿತ ವಿನಂತಿಸಿದೆ.

