ಬೆಂಗಳೂರು : ಕುಂದಲಹಳ್ಳಿಯ ದಿ ರಾಮೇಶ್ವರಂ ಕೆಫೆ ಬಾಂಬ್ ಬಾಂಬ್ ಸ್ಪೋಟದ ವೇಷಮರೆಸಿಕೊಂಡು ಓಡಾಡುತ್ತಿರುವ ಶಂಕಿತರಿಬ್ಬರ ತಲೆಗೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ತಲಾ 10 ಲಕ್ಷ ರು. ಬಹುಮಾನ ಘೋಷಿಸಿದ್ದು, ಅವರ ಫೋಟೋಗಳನ್ನು ಪ್ರಕಟಿಸಿದೆ
ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮೋಸ್ಟ್ ವಾಟೆಂಡ್ ಶಂಕಿತ ಉಗ್ರರಾದ ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವೀರ್ ಹುಸೇನ್ ಶಾಜಿಬ್ ಕುರಿತು ಸುಳಿವು ನೀಡಿದರೆ 10 ಲಕ್ಷ ರು ಬಹುಮಾನ ನೀಡುವುದಾಗಿ ಎನ್ಐಎ ಶುಕ್ರವಾರ ಘೋಷಿಸಿದೆ. ಈ ಹಿಂದೆ ಹಳೆಯ ಪ್ರಕರಣಗಳಲ್ಲಿ ಈ ಇಬ್ಬರ ತಲೆಗೆ 5 ಲಕ್ಷ ರು. ಬಹುಮಾನವನ್ನು ಎನ್ಐಎ ಪ್ರಕಟಿಸಿತ್ತು. ಇದೇ ವೇಳೆ, ಮತೀನ್ ಹಾಗೂ ಶಾಜಿಬ್ನ ಸ್ಪಷ್ಟವಾಗಿ ಕಾಣುವ ಪೋಟೋಗಳನ್ನು ಸಹ ಸಾರ್ವಜನಿಕವಾಗಿ ಪ್ರಕಟಿಸಿರುವ ಎನ್ಐಎ, ಈ ಶಂಕಿತರ ಕುರಿತು ಸುಳಿವು ನೀಡುವ ಮಾಹಿತಿದಾರರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಹೇಳಿದೆ