Home » “ರಾಷ್ಟ್ರೀಯ ಸಮೂಹ ಗಾಯನ ಸ್ಪರ್ಧೆ”
 

“ರಾಷ್ಟ್ರೀಯ ಸಮೂಹ ಗಾಯನ ಸ್ಪರ್ಧೆ”

by Kundapur Xpress
Spread the love

ಉಡುಪಿ : ಭಾರತ್ ವಿಕಾಸ್ ಪರಿಷತ್ ಒಂದು ಸೇವಾ ಸಂಸ್ಥೆ. ಇದರ ಶಾಖೆಗಳು ದೇಶದ ಉದ್ದಗಲಗಳಲ್ಲಿ ಹಾಗೂ ವಿದೇಶಗಳಲ್ಲೂ ವ್ಯಾಪಿಸಿದೆ.ಭಾರತ್ ವಿಕಾಸ್ ಪರಿಷತ್ ದೇಶದ ಸರ್ವಾಂಗೀಣ ಪ್ರಗತಿಯಲ್ಲಿ ತನ್ನನ್ನು ತಾನು ಸಮರ್ಪಿಸಿಕೊಂಡಿದೆ. ಈ ಸಂಸ್ಥೆಯ ಉದ್ದೇಶಿತ ಕಾರ್ಯಕ್ರಮಗಳಲ್ಲಿ “ಭಾರತ್ ಕೋ ಜಾನೋ” “ಭಾರತವನ್ನು ತಿಳಿಯಿರಿ” ಎಂಬ ಒಂದು ರಸಪ್ರಶ್ನೆ ಕಾರ್ಯಕ್ರಮ. ಪ್ರತಿ ಬಾಲಕ,ಬಾಲಕಿ ತನ್ನ ದೇಶದ ಬಗ್ಗೆ ತಿಳಿದಿರಲಿ, ಹೆಮ್ಮೆಪಟ್ಟು ಸತ್ಪ್ರಜೆಯಾಗಿ ಬೆಳೆಯಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.
ಇಂತಹುದೇ ಇನ್ನೊಂದು ಕಾರ್ಯಕ್ರಮ “ರಾಷ್ಟ್ರೀಯ ಸಮೂಹ ಗಾಯನ ಸ್ಪರ್ಧೆ”. ಈ ಸ್ಪರ್ಧೆಯು ಮಕ್ಕಳಲ್ಲಿ, ಜನ ಸಮುದಾಯದಲ್ಲಿ,ದೇಶಭಕ್ತಿ ಕಿಚ್ಚನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿದೆ. ಈ ಕಾರ್ಯಕ್ರಮಗಳಲ್ಲಿ ಉಡುಪಿ ಸುತ್ತಮುತ್ತಲಿನ ಶಾಲೆಯ ಬಾಲಕ ಬಾಲಕಿಯರು ಪಾಲ್ಗೊ ಪಾಲ್ಗೊಳ್ಳಲಿದ್ದಾರೆ.
ಈ ಕಾರ್ಯಕ್ರಮಗಳನ್ನು ತಾರೀಕು 26 .8.2023 ರಂದು ಮತ್ತು 02.9.2023 ರಂದು ಅನುಕ್ರಮವಾಗಿ,ಟಿ ಏ ಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕುಂಜಿ ಬೆಟ್ಟು,ಉಡುಪಿ, ಇಲ್ಲಿ ಮಧ್ಯಾಹ್ನ ಗಂಟೆ 2:00 ರಿಂದ ನಡೆಯಲಿದೆ ಎಂದು ಭಾರತ್ ವಿಕಾಸ್ ಪರಿಷದ್, ಭಾರ್ಗವ ಶಾಖೆ,ಕಲ್ಸಂಕ ಉಡುಪಿ ಇದರ ಸಂಚಾಲಕ ಶ್ರೀ ಪ.ವಸಂತ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

   

Related Articles

error: Content is protected !!