Home » ಪಾಕ್ ಪರ ಘೋಷಣೆ ಎನ್‌ಐಎ ತನಿಖೆ
 

ಪಾಕ್ ಪರ ಘೋಷಣೆ ಎನ್‌ಐಎ ತನಿಖೆ

ಸುನಿಲ್‌ಕುಮಾ‌ರ್ ಆಗ್ರಹ

by Kundapur Xpress
Spread the love

ಬೆಂಗಳೂರು :  ರಾಜ್ಯ ಸಭೆ ಚುನಾವಣಾ ಫಲಿತಾಂಶದ ಬಳಿಕ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಆರೋಪದ ಬಗ್ಗೆ ತನಿಖೆ ನಡೆಸಲು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸಬೇಕು ಎಂದು ಬಿಜೆಪಿ ಸದಸ್ಯ ಎ.ಸುನಿಲ್‌ಕುಮಾರ್ ಆಗ್ರಹಿಸಿದ್ದಾರೆ.” ಬುಧವಾರ ಸದನದಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಘಟನೆಯ ಸಂಪೂರ್ಣ ಹೊಣೆಯನ್ನು ಸರ್ಕಾರ ಹೊರಬೇಕು. ಅಲ್ಲಿಯವರೆಗೆ ಬಿಜೆಪಿ ಹೋರಾಟ ನಡೆಸಲಿದೆ ಎಂದು ಹೇಳಿದರು. ಜಿನ್ನಾ ಮನಸ್ಥಿತಿಯವರು ಇಂತಹ ಕೃತ್ಯ ಎಸಗಿದ್ದು, ಪಾಕಿಸ್ತಾನ ಜಿಂದಾಬಾದ್ ಎಂದು  ಘೋಷಣೆ ಕೂಗುವ ಮನಸ್ಥಿತಿಯವರು ವಿಧಾನಸೌಧದೊಳಗೆ, ಹೊರಗೆ ಇದ್ದರೆ ಅದನ್ನು ದೊಡ್ಡ ಪ್ರಮಾಣದಲ್ಲಿ ಖಂಡಿಸಬೇಕು ಎಂದರು. ಸಂವಿಧಾನದ ಕುರಿತು ಸರ್ಕಾರ ಕಾರ್ಯಾಗಾರ ನಡೆಸಿದ್ದು, ಈ ವೇಳೆ ಭಾರತ ವಿರೋಧಿ ಧೋರಣೆಯುಳ್ಳ ನಿತಾಶ ಕೌಲ್ ಎಂಬುವವರಿಂದ ಭಾಷಣ ಮಾಡಿಸಿದೆ ಎಂದು ಹೇಳಿದಾಗ ಕಾಂಗ್ರೆಸ್ ನಿಂದ ಆಕ್ಷೇಪ ವ್ಯಕ್ತವಾಯಿತು. ಅಲ್ಲದೇ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸ್ಪಷ್ಟನೆ ನೀಡಲು ಮುಂದಾದರು. ಆದರೆ, ಸುನಿಲ್ ಕುಮಾರ್ ಮಾತು ಮುಂದುವರಿಸಿ. ಘೋಷಣೆ ಕೂಗಿದ ಗುಂಪನ್ನು ಹೊರಹೋಗಲು ಬಿಡಲಾಗಿದೆ. ಈವರೆಗೂ ಒಬ್ಬರನ್ನೂ ಬಂಧಿಸಿಲ್ಲ. ಇದರ ಹಿಂದಿರುವ ಶಕ್ತಿ ಯಾವುದು ಎಂದು ಕಿಡಿಕಾರಿದರು.

   

Related Articles

error: Content is protected !!