ಬೆಂಗಳೂರು : ಕುಂದಲಹಳ್ಳಿಯ ದಿ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಸಂಚು ಭೇದಿಸುವಲ್ಲಿ ಯಶಸ್ಸು ಕಂಡಿರುವ ರಾಷ್ಟ್ರೀಯ ತನಿಖಾ ದಳ (ಎನ್ ಐಎ), ಈ ವಿಧ್ವಂಸಕ ಕೃತ್ಯಕ್ಕೆ ಸಹಕರಿಸಿದ್ದ ಶಂಕಿತ ಉಗ್ರನೊಬ್ಬನನ್ನು ಸೆರೆ ಹಿಡಿದಿದೆ.
ತನ್ಮೂಲಕ ಕಫೆ ಸ್ಫೋಟ ಪ್ರಕರಣದಲ್ಲಿ ಮೊದಲ ಬಂಧನವಾದಂತಾಗಿದೆ. ಚಿಕ್ಕಮಗಳೂ ರು ಜಿಲ್ಲೆ ಕಳಸದ ಮುಜಾಮಿಲ್ ಷರೀಫ್ (34) ಬಂಧಿತನಾಗಿದ್ದು, ಆತನಿಂದ ಲ್ಯಾಪ್ ಟಾಪ್ ಹಾಗೂ ಹಣ ಜಪ್ತಿ ಮಾಡಲಾಗಿದೆ. ಈತ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದ. ಸ್ಪೋಟಕ್ಕೆ ಲಾಜಿಸ್ಟಿಕಲ್ ಸಹಕಾರ ನೀಡಿದ್ದ ಎಂದು ಎನ್ಐಎ ಮಾಹಿತಿ ನೀಡಿದ್ದಾರೆ