Home » ನಾಗಬೊಬ್ಬರ್ಯ ದಶಮಾನೋತ್ಸವ : ಕೃತಜ್ಞತಾ ಸಭೆ
 

ನಾಗಬೊಬ್ಬರ್ಯ ದಶಮಾನೋತ್ಸವ : ಕೃತಜ್ಞತಾ ಸಭೆ

ಶ್ರೀನಾಗಬೊಬ್ಬರ್ಯ, ಹಾಯ್ಗುಳಿ ಹಾಗೂ ಪರಿವಾರ ದೇವಸ್ಥಾನ

by Kundapur Xpress
Spread the love

ಕುಂದಾಪುರ: ನಗರದ ಚಿಕ್ಕನ್‌ಸಾಲ್ ರಸ್ತೆಯ ರೋಯಲ್ ಸಭಾಭವನದ ಹತ್ತಿರದ ಶ್ರೀನಾಗಬೊಬ್ಬರ್ಯ, ಹಾಯ್ಗುಳಿ ಹಾಗೂ ಪರಿವಾರ ದೇವಸ್ಥಾನದ ವರ್ಧಂತ್ಯೋತ್ಸವದ ದಶಮಾನೋತ್ಸವದ ಪ್ರಯುಕ್ತ ಧಾರ್ಮಿಕ ಹಾಗೂ ಸಾಂಸ್ಕೃತಿಕ  ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿತು

ಈ ಹಿನ್ನಲೆಯಲ್ಲಿ ನಡೆದ ಕೃತಜ್ಞತಾ ಸಭೆಯಲ್ಲಿ ದಶಮಾನೋತ್ಸವ ಸಮಿತಿಯ ಅಧ್ಯಕ್ಷರಾದ ರಾಧಾಕೃಷ್ಣರವರು ಮಾತನಾಡಿ ಎಲ್ಲರ ಸಹಕಾರದಿಂದ ಎಲ್ಲಿಯೂ ಲೋಪವಾಗದಂತೆ ನಿರೀಕ್ಷೆಗೂ ಮೀರಿ ಕಾರ್ಯಕ್ರಮವು ಯಶಸ್ವಿಯಾಗಿದೆ ಪ್ರತಿಯೊಬ್ಬರು ಅವರವರ ಜವಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸಿದ್ದರಿಂದ ಕಾರ್ಯಕ್ರಮವು ಯಶಸ್ವಿಯಾಗಿದೆ ಎಂದು ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು

ವೇದಿಕೆಯಲ್ಲಿ ಕೋಶಾಧಿಕಾರಿಗಳಾದ ಮೇಲ್‌ಹಿತ್ಲು ರಮೇಶ್‌ ಪೂಜಾರಿ ಕಾರ್ಯದರ್ಶಿ ಪ್ರಶಾಂತ್‌ ಮೊಗವೀರ ಹಾಗೂ ಉಪಾಧ್ಯಕ್ಷರಾದ ಸದಾಶಿವ ಆಚಾರ್ಯ ಉಪಸ್ಥಿತರಿದ್ದರು

ಮೇಲ್‌ಹಿತ್ಲು ರಮೇಶ್‌ ಪೂಜಾರಿ ಸ್ವಾಗತಿಸಿ ನಾಗರಾಜ್ ಪಿ ಆಚಾರ್ಯ ಧನ್ಯವಾದವಿತ್ತರು

 

Related Articles

error: Content is protected !!