Home » ಬಾಳ್ಕುದ್ರು ಬಿಲ್ಲವ ಸಂಘಟನೆಯ ಆಶ್ರಯದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ
 

ಬಾಳ್ಕುದ್ರು ಬಿಲ್ಲವ ಸಂಘಟನೆಯ ಆಶ್ರಯದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ

by Kundapur Xpress
Spread the love

ಕೋಟ : ಬಾಳ್ಕುದ್ರು ಹಂಗಾರಕಟ್ಟೆ ಬ್ರಹ್ಮ ಶ್ರೀನಾರಾಯಣ ಗುರು ಬಿಲ್ಲವ ಸಂಘದ ಆಶ್ರಯದಲ್ಲಿ ಬಿಲ್ಲವ ಮಹಿಳಾ ಘಟಕದ ನೇತೃತ್ವದಲ್ಲಿ ವರಮಹಾಲಕ್ಷ್ಮೀ ಪೂಜೆಯನ್ನು ಹಮ್ಮಿಕೊಂಡಿತು.

ಈ ಪ್ರಯುಕ್ತ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ತದನಂತರ ವೇ.ಮೂ ವೆಂಕಟರಮಣ (ಸೂರಿ) ಭಟ್ ಬಿರ್ತಿ ಇವರ ನೇತೃತ್ವದಲ್ಲಿ ವರಮಹಾಲಕ್ಷ್ಮೀ ಪೂಜೆ, ಸಹಸ್ರ ಕುಂಕುಮಾರ್ಚನೆ ಇತರ ವಿಧಿವಿಧಾನಗಳು ನೆರವೆರಿತು.

ಈ ಸಂದರ್ಭದಲ್ಲಿ ಬಿಲ್ಲವ ಸಂಘದ ಗೌರವಾಧ್ಯಕ್ಷರಾದ ನಾರಾಯಣ ಪೂಜಾರಿ,ಗುರಿಕಾರರಾದ ಕುಷ್ಟ ಪೂಜಾರಿ,ಬಿಲ್ಲವ ಸಂಘದ ಅಧ್ಯಕ್ಷ ವಿಜಯ ಪೂಜಾರಿ,ಮಹಿಳಾ ಘಟಕದ ಅಧ್ಯಕ್ಷ ಶಕುಂತಲಾ ವಾಸುದೇವ ಕೋಟ್ಯಾನ್, ಅರ್ಚಕರಾದ ಶಂಕರ್ ಪೂಜಾರಿ ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.

 

Related Articles

error: Content is protected !!