70
ಸಾಸ್ತಾನ : ಗೋಳಿಗರಡಿ ಬ್ರಹ್ಮಬೈದರ್ಕಳ ದೈವಸ್ಥಾನದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತೋತ್ಸವ ಅಂಗವಾಗಿ ಯುವ ಕಲಾವಿದೆ ಪ್ರಜ್ಞಾ ಜಿ.ಹಂದಟ್ಟು ಇವರ ಕೈಯಂಗಳದಿ ಮೂಡಿಬಂದ ಬೃಹತ್ ಬ್ರಹ್ಮಶ್ರೀನಾರಾಯಣಗುರುಗಳ ರಂಗೋಲಿ ಚಿತ್ರ ವಿಶೇಷವಾಗಿ ಗಮನ ಸೆಳೆಯಿತು.ಈ ಹಿಂದೆ ಕಟೀಲು ದುರ್ಗಾಪರಮೇಶ್ವರಿ,ಕೋಟ ಅಮೃತೇಶ್ವರಿ,ಚಿತ್ರನಟ ದೊಡ್ಡಣ್ಣ ಸೇರಿದಂತೆ ಅನೇಕ ಗಣ್ಯ ಚಿತ್ರ ಬಿಡಿಸಿ ಗಮನ ಸೆಳೆದಿದ್ದಾರೆ ಈ ಕಲಾವಿದೆ ಗುರುವಿಲ್ಲದೆ ಚಿತ್ರ ಕಲಾವಿದೆಯಾಗಿದ್ದು ಯೂಟೂಬ್ ಮೂಲಕ ಕಲಿತು ಇಂದು ಚಿತ್ರಕಲಾವಿದೆಯಾಗಿ ಗುರುತಿಸಿಕೊಂಡಿದ್ದಾಳೆ.

