Home » ಗೋಪಾಡಿ ಗ್ರಾಮ ಆಡಳಿತಾಧಿಕಾರಿ ಕಛೇರಿ ಉದ್ಘಾಟನೆ
 

ಗೋಪಾಡಿ ಗ್ರಾಮ ಆಡಳಿತಾಧಿಕಾರಿ ಕಛೇರಿ ಉದ್ಘಾಟನೆ

by Kundapur Xpress
Spread the love

ಕುಂದಾಪುರ :  ನೂತನವಾಗಿ ನಿರ್ಮಾಣಗೊಂಡ ಗೋಪಾಡಿ ಬೀಜಾಡಿ ಗ್ರಾಮ ಆಡಳಿತ ಕಛೇರಿಯನ್ನು ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿಯವರು  ದೀಪವನ್ನು ಪ್ರಜ್ವಲಿಸಿ ಉದ್ಘಾಟಿಸಿದರು

ಅವರು ಮಾತನಾಡಿ ಗ್ರಾಮ ಪಂಚಾಯತ್ ಹಾಗೂ ಗ್ರಾಮ ಆಡಳಿತ ಕಚೇರಿಯು ಒಟ್ಟಿಗೆ ಇದ್ದಲ್ಲಿ. ಗ್ರಾಮಸ್ಥರಿಗೆ ತುಂಬಾ ಅನುಕೂಲವಾಗಲಿದೆ..ಗ್ರಾಮ ಅಭಿವೃದ್ಧಿ ಆದರೆ ಮಾತ್ರ ದೇಶದ ಅಭಿವೃದ್ಧಿ ಆಗುತ್ತದೆ. ನೇರವಾಗಿ ಸಾರ್ವಜನಿಕರಿಗೆ ಸಿಗಬೇಕಾದ ಸೌಲಭ್ಯಗಳು ಗ್ರಾಮ ಪಂಚಾಯಿತಿ ಮೂಲಕ ದೊರೆಯುತ್ತಿದ್ದು. ಗ್ರಾಮ ಆಡಳಿತ ಕಚೇರಿ ಸುಸಜ್ಜಿತ ಕಟ್ಟಡ ಇಲ್ಲದಿರುವ ಬಗ್ಗೆ ಗ್ರಾಮಸ್ಥರಲ್ಲಿ ಕೊರಗು ಇತ್ತು. ಅದು ಈಗ ನಿವಾರಣೆಯಾಗಿದೆ.ಯಾವುದೇ ಫಲಾಪೇಕ್ಷೆ ಇಲ್ಲದೆ ಎಲ್ಲ ವರ್ಗದ ಜನರ ಸೇವೆ ಮಾಡುತ್ತಿರುವ ಗ್ರಾಮಾಡಳಿತಾಧಿಕಾರಿ ಬಸವ ಮೊಗವೀರ ಅವರು ಇತರರಿಗೆ ಮಾದರಿ ಎಂದರು.

ತಹಶೀಲ್ದಾರ್ ಪ್ರದೀಪ್ ಕುರುಡೇಕರ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು ಬೀಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಪೂಜಾರಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಗೋಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ಶಾಸಕರು ಹಾಗೂ ತಹಶೀಲ್ದಾರರು ನೂತನ ಕಟ್ಟಡ ನಿರ್ಮಾಣಕ್ಕೆ ನೀಡಿದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು

ಗೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶಾಂತ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾಮಸ್ಥರು ಪರವಾಗಿ ಬಿಜಾಡಿ ಗ್ರಾಮ ಪಂಚಾಯಿ ಸದಸ್ಯ ಶೇಖರ್ ಚಾತ್ರಬೆಟ್ಟು , ರಾಜು ಬೆಟ್ಟಿನ ಮನೆ, ಡಾ ಸುಧಾಕರ್ ನಂಬಿಯಾರ್, ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿದರು.ಇದೆ ವೇಳೆ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ, ಹಾಗೂ ಗ್ರಾಮಾಡಳಿತಾಧಿಕಾರಿ ಬಸವ ಮೊಗವೀರ, ಕಟ್ಟಡದ ಗುತ್ತಿಗೆದಾರ ಖಾದರ್ ಇವರನ್ನು ಅಭಿನಂದಿಸಲಾಯಿತು.

ಈ ಸಭೆಯಲ್ಲಿಬೀಜಾಡಿ ಗೋಪಾಡಿ ಗ್ರಾಮ ಪಂಚಾಯತ್ ಸದಸ್ಯರು,, ಜಿ.ಪಂ. ಮಾಜಿ ಸದಸ್ಯರು, ರಾಜಸ್ವನಿರೀಕ್ಷಕ ದಿನೇಶ್ (ಆರ್. ಐ) ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಪಿಡಿಓ ದಿನೇಶ್ ನಾಯಕ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

 

Related Articles

error: Content is protected !!