Home » ಇಂದು ಪತ್ರಿಕಾ ದಿನಾಚರಣೆ
 

ಇಂದು ಪತ್ರಿಕಾ ದಿನಾಚರಣೆ

by Kundapur Xpress
Spread the love

ಪತ್ರಿಕೆಗಳು ಸುದ್ದಿಗಳನ್ನು ಸಂಗ್ರಹಿಸಿ ಜನ ಸಮೂಹಕ್ಕೆ ತಲುಪುವ ಕಾರ್ಯ ಮಾಡುತ್ತಿದೆ ಪತ್ರಿಕೋದ್ಯಮದ ವಿಧಗಳು ಹಲವಾರು ಆಧುನಿಕ ಯುಗದಲ್ಲಿ ಪತ್ರಿಕೆ ಮನೋ ಧರ್ಮಗಳು ಎತ್ತ ಸಾಗುತ್ತಿದೆ ಎಂದು ಊಹಿಸುವುದು ಕಷ್ಟವಾಗಿದೆ ವೃತ್ತ ಪತ್ರಿಕೆಗಳಿಗೆ ಈಗೀಗ ವಿಶೇಷವಾದ ಸ್ನಾನ ಮಾನವಿದೆ ಲಭಿಸುತ್ತಿದೆ                  

ಜುಲೈ 1ನೇ ತಾರೀಕನ್ನು ಕರ್ನಾಟಕದಲ್ಲಿ ಪತ್ರಿಕಾ ದಿನಾಚರಣೆಯಾಗಿ ಆಚರಿಸುತ್ತಾರೆಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ ಆರಂಭವಾಗಿದ್ದು 1843 ಜುಲೈ 1ರಂದು ಹಾಗಾಗಿ ಇಂದಿನ ದಿನವನ್ನು ಪತ್ರಿಕಾ ದಿನವಾಗಿ ಆಚರಿಸುತ್ತಾರೆ”ಮಂಗಳೂರು ಸಮಾಚಾರ”ವೆಂಬ ಹೆಸರಿನಲ್ಲಿ ಆರಂಭಗೊಂಡ ಕನ್ನಡ ಪತ್ರಿಕೆಯಿಂದ ಕನ್ನಡ ಪತ್ರಿಕೆ ಮತ್ತು ಪತ್ರಿಕೋದ್ಯಮ ಚರಿತ್ರೆ  ಕರ್ನಾಟಕದಲ್ಲಿ ಆರಂಭವಾಯಿತು ಎಂದು ಇತಿಹಾಸ ಹೇಳುತ್ತದೆ                                               

ಇಂದು ಪತ್ರಿಕೆ ಮತ್ತು ಪತ್ರಿಕೋದ್ಯಮಗಳು ಈ ಮೊಬೈಲ್ ಯುಗದಲ್ಲಿ ಹಲವು ಬದಲಾವಣೆ ಕಂಡಿದೆ ಪತ್ರಿಕೋದ್ಯಮದ ರೀತಿ ನೀತಿಗಳು ಸ್ವರೂಪಗಳು ಬದಲಾಗಿದೆ ಮುದ್ರಣ ಮಾಧ್ಯಮದ ಜಾಗವನ್ನು ಬಹುಪಾಲು ಆನ್ಲೈನ್ ಪತ್ರಿಕೆಗಳು ಆಕ್ರಮಿಸಿಕೊಳ್ಳುತ್ತಿದೆ  ನನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಹೆಚ್ಚು ಸಮೃದ್ಧವಾಗುತ್ತಾ ಸಾಗುತ್ತಿದೆ ಟಿವಿ ಯುಗ ಮತ್ತು ಸೋಶಿಯಲ್ ಮೀಡಿಯಾ ಮತ್ತು ವಾಟ್ಸಾಪ್ ನ್ಯೂಸ್ ಗಳಿಂದಾಗಿಯೂ ಪ್ರಿಂಟ್ ಮೀಡಿಯಾ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಸಮಾಜದ ಜನರನ್ನು ತಲಪುತ್ತಿರುವುದೇ ವಿಶೇಷ                

ಪತ್ರಿಕೆಗಳು ಮತ್ತು ಪತ್ರಕರ್ತರು ಸಮಾಜದ ಪ್ರತಿಬಿಂಬಗಳು ಸಮಾಜದ ಸ್ವಾಸ್ಥ್ಯ  ಕಾಪಾಡುವಲ್ಲಿ ಪತ್ರಕರ್ತ ಪಾಲು ಬಹುಮುಖ್ಯವಾಗಿರುತ್ತದೆ ಆಧುನಿಕ ಸಮಾಜದ ಕನ್ನಡಿ ಎಂದು ಪತ್ರಿಕೆ ಮತ್ತು ಪತ್ರಕರ್ತರನ್ನು ಉಲ್ಲೇಖಿಸಿ ಸ್ನಾನಮಾನ ನೀಡಿ ಕೊಂಡಾಡುತ್ತಿರುವುದು ನಿತ್ಯ ಸತ್ಯ

ಪತ್ರಕರ್ತರನ್ನು ಸಮಾಜ ನಾಲ್ಕನೇ ಅಂಗ ಎಂದು ಕರೆದಿದ್ದಾರೆ ಸಮಾಜವನ್ನು ತಿದ್ದುವ ಮನೋಭಾವವನ್ನು ಪತ್ರಕರ್ತರು ರೂಡಿಸಿಕೊಂಡರೆ ಮಾತ್ರ ಈ ಪತ್ರಿಕಾ  ದಿನಾಚರಣೆಗೂ ಒಂದು ಮಹತ್ವದ ಸ್ಥಾನ ಬರುವುದು ಎಲ್ಲಾ ಪತ್ರಕರ್ತ ಮಿತ್ರರಿಗೂ ಪತ್ರಿಕಾ ಓದುಗರಿಗೂ ಹಾಗೂ ಸಾಮಾಜಿಕ ಜಾಲಾತಾಣದ ಸುದ್ದಿವಾಹಿನಿಗಳಿಗೂ  ದಿನಾಚರಣೆಯ ಶುಭಾಶಯಗಳು

ಈಶ್ವರ್ *ಸಿ ನಾವುಂದ

   

Related Articles

error: Content is protected !!