66
ಉಡುಪಿ : ಉಡುಪಿಯ ಕೃಷ್ಣಮಠದ ಪ್ರಾಚೀನ ಸೌಂದರ್ಯವನ್ನು ಆಧುನಿಕ ಬೆಳಕಿಂಡಿಯಲ್ಲಿ ದರ್ಶಿಸುವ ಕಾಷ್ಟ್ರ ಯಾಳಿಯ ಲೋಕಾರ್ಪಣೆಯನ್ನು ಆ.9ರಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ನೆರವೇರಿಸಲಿದ್ದಾರೆ.
ಯಾಳಿಯನ್ನು ಹೊಸ್ತಿಲ ಹುಣ್ಣಿಮೆಯ ಪರ್ವ ದಿನದಂದು ಆ.9ರಂದು ಬೆಳಿಗ್ಗೆ ಮಹಾಪೂಜೆಯ ಬಳಿಕ 10 .00 ಗಂಟೆಗೆ ಉದ್ಘಾಟಣೆಯಾಗಲಿದೆ. ಬಳಿಕ ರಾಜಾಂಗಣದಲ್ಲಿ ನಡೆಯುವ ಸಭೆ ನಡೆಯಲಿದೆ.
ಇನ್ಫೋಸಿಸ್ ಫೌಂಡೇಶನ್ ಪ್ರವರ್ತಕರಾದ ಸುಧಾ ಮೂರ್ತಿ ಮತ್ತು ನಿವೃತ್ತ ಮುಖ್ಯ ನ್ಯಾಯಾಧೀಶ ದಿನೇಶ್ ಕುಮಾರ್ ರವರು ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.

