262
ಕುಂದಾಪುರ: ನಗರದ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಓಕ್ ವುಡ್ ಇಂಡಿಯನ್ ಸ್ಕೂಲ್ ಇದರ ಆಡಳಿತ ಮಂಡಳಿಯನ್ನು(Management) ಬೇರೆಯವರಿಗೆ ವಹಿಸಿಕೊಡಲಾಗಿದೆ ಎಂದು ಅಪಪ್ರಚಾರ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ನಾವು ಈ ಮೂಲಕ ಸ್ಪಷ್ಟಪಡಿಸುವುದೇನೆಂದರೆ ನಾವು ಬೇರೆ ಯಾರಿಗೂ ನಮ್ಮ ಆಡಳಿತ ಮಂಡಳಿಯನ್ನು(Management) ವಹಿಸಿಕೊಟ್ಟಿರುವುದಿಲ್ಲ ನಮ್ಮ ಸಂಸ್ಥೆಯ ಬೆಳವಣಿಗೆಯನ್ನು ಸಹಿಸದ ಕೆಲವು ಸ್ಥಾಪಿತ ಹಿತಾಸಕ್ತಿಗಳು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದು ಇದಕ್ಕೆ ಶಾಲೆಯ ಮಕ್ಕಳ ಪೋಷಕರು ಹಾಗೂ ಸಾರ್ವಜನಿಕರು ಕಿವಿಗೊಡಬಾರದು ಹಾಗೂ ಆತಂಕ ಪಡಬಾರದೆಂದು ಶಾಲೆ ಆಡಳಿತ ಮಂಡಳಿ ಸದಸ್ಯರಾದ ನೀತಾ ಶೆಟ್ಟಿಯವರು ವಿನಂತಿಸಿಕೊಂಡಿದ್ದಾರೆ

