75
ಕೋಟ : ಇಲ್ಲಿನ ಕೋಟ ಪಡುಕರೆ ಸೇರಿದಂತೆ ವಿವಿಧ ಕರಾವಳಿ ಕಡಲ ಕಿನಾರೆ ವ್ಯಾಪ್ತಿಯಲ್ಲಿ ಆಟಿ ಅಮಾವಾಸ್ಯೆ ಅಂಗವಾಗಿ ಸಾಕಷ್ಟು ಜನ ಸಾರ್ವಜನಿಕರು ಸಮುದ್ರ ಸ್ನಾನ ಸೇರಿರುವುದು ಕಂಡುಬಂತು.
ಒಂದೆಡೆ ವಿಪರೀತ ಮಳೆ ಇನ್ನೊಂದೆಡೆ ಸಮುದ್ರ ಪ್ರಕ್ಷುಬ್ಧದ ನಡುವೆ ಸಮುದ್ರ ಸ್ನಾನಕ್ಕೆ ಸಾಕಷ್ಟು ಜನ ಸಮುದ್ರ ಸ್ನಾನ ಗೈದರು.
ಕೋಟ ಪಡುಕರೆ,ಕೋಟತಟ್ಟು ಪಡುಕರೆ,ಸಾಲಿಗ್ರಾಮದ ಪಾರಂಪಳ್ಳಿ ಪಡುಕರೆ,ಕೋಡಿ ಕನ್ಯಾಣ,ಹೊಸಬೇಂಗ್ರೆ,ಕೋಡಿ ತಲೆ,ತೆಕ್ಕಟ್ಟೆ ಕೊಮೆ ವ್ಯಾಪ್ತಿಯಲ್ಲಿ ಆಟಿ ಅಮವಾಸ್ಯೆಯನ್ನು ಅರ್ಥಪೂರ್ಣಗೊಳಿಸಿಕೊಂಡರು. ಆಷಾಢ ಮಾಸದ ವಿಶೇಷತೆಯ ಹಿನ್ನಲ್ಲೆಯಲ್ಲಿ ದೇಗುಲದಲ್ಲಿ ಸಾಕಷ್ಟು ಜನ ಭಕ್ತರು ದಂಡು ಕಂಡುಬಂತು.

