ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಮ್ಮ ನಿವಾಸದಲ್ಲಿಯೇ ಲೋಕಸಭಾ ಚುನಾವಣಾ ಕಾರ್ಯಾಲಯ ಸ್ಥಾಪಿಸಿದ್ದು, ಗುರುವಾರ ಇದರ ಉದ್ಘಾಟನೆ ನೆರವೇರಿತು.
ಕಾರ್ಯಾಲಯ ಉದ್ಘಾಟನೆ ಅಂಗ ವಾಗಿ ಬೆಳಗ್ಗೆ ಋತ್ವಿಜರಿಂದ ಸಹಸ್ರ ಮೋದಕ ಗಣಪತಿ ಹೋಮ ನೆರವೇರಿಸ ಲಾಯಿತು. ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಐವರು ಮುತ್ತೈದೆ ಯರ ಮೂಲಕ ತಮ್ಮ ಕಚೇರಿಯನ್ನು ಈಶ್ವರಪ್ಪನವರು ಉದ್ಘಾಟಿಸಿದರು ಈ ವೇಳೆ ಮಾತನಾಡಿದ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಚಿಹ್ನೆ ಮಾತ್ರ ಬಾಕಿ ಇದೆ. ಏ.19ರಂದು ಚಿಹ್ನೆಯೂ ಸಿಗಲಿದೆ. ಏ.12 ರಂದು ನಾಮಪತ್ರ ಸಲ್ಲಿಸುತ್ತೇನೆ ಎಂದರು. ರಾಜ್ಯದಲ್ಲಿ ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 25 ಸ್ಥಾನಗಳು ಬಂದಿದ್ದವು. ಈ ಬಾರಿ ಹೇಳಿಕೊಳ್ಳುವಷ್ಟು ಸ್ಥಾನಗಳು ಬರಲ್ಲ ಎಂದರು. ಯಡಿಯೂರಪ್ಪ ಅವರಿಗೆ ಡಮ್ಮಿ ಅಭ್ಯರ್ಥಿ ಹಾಕಿಸಿಕೊಂಡು ಬಂದು ಗೆದ್ದು ಅಭ್ಯಾಸ. ಅವರು ಲಿಂಗಾಯತ ನಾಯ ಕರು ಮತ್ತು ಹಿಂದುಳಿದ ನಾಯಕರನ್ನು, ತುಳಿದು ಮಗನನ್ನು ಗೆಲ್ಲಿಸಿಕೊಂಡು ಬರುತ್ತಿದ್ದಾರೆ.ಅದು ಈ ಚುನಾವಣೆಯಲ್ಲಿ ಅಂತ್ಯವಾಗಬೇಕು ಎಂದರು