ಬೆಂಗಳೂರು : ಮುಂದಿನ ಐದು ವರ್ಷಗಳ ಕಾಲ ದೇಶವನ್ನು ಆಳಲು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವೇ ಸೂಕ್ತ ಎಂದು ಶೇ.78ರಷ್ಟು ಜನರು ಹೇಳಿದ್ದಾರೆ. ವಿಪಕ್ಷಗಳ ಕೂಟವಾಗಿರುವ ‘ಇಂಡಿಯಾ’ ಪರ ಶೇ.21ರಷ್ಟು ಮಂದಿ ಮಾತ್ರವೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಏಷ್ಯಾನೆಟ್ ಡಿಜಿಟಲ್ ನೆಟ್ವರ್ಕ್ ಸಮೀಕ್ಷೆ ಹೇಳಿದೆ.
ಮೋದಿ ಅಲೆಯನ್ನು ತಡೆಯಲು ಇಂಡಿಯಾ ಕೂಟಕ್ಕೆ ಸಾಧ್ಯವಿಲ್ಲ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯಾತ್ರೆಯಿಂದ ಅವರ ಪಕ್ಷಕ್ಕೆ ಹೆಚ್ಚು ಲಾಭವಿಲ್ಲ ಎಂದೂ ಈ ಸಮೀಕ್ಷೆ ನುಡಿದಿದೆ. ಏಷ್ಯಾನೆಟ್ ನ್ಯೂಸ್ ನೆಟ್ ವರ್ಕ್ ಆನ್‌ಲೈನ್‌ನಲ್ಲಿ ನಡೆಸಿದ ಮೂಡ್ ಆಫ್ ದ ನೇಷನ್’ ಸಮೀಕ್ಷೆಯ ಪ್ರಕಾರ ಮುಂದಿನ ಚುನಾವಣೆಯಲ್ಲಿ ಎನ್‌ಡಿಎಗೆ ಪೈಪೋಟಿ ನೀಡಲು ವಿಪಕ್ಷಗಳು ದೊಡ್ಡ ಮಟ್ಟದ ಸಾಹಸ ಪ್ರದರ್ಶನ ಮಾಡಬೇಕಿದೆ ಎನ್ನುವುದು ಕಂಡುಬಂದಿದೆ.