ಕುಂದಾಪುರ : ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅನೇಕ ಸಮಯಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಹೆಡ್ ಕಾನ್ಸ್ಟೇಬಲ್ ರವರು ವಿವಿಧ ಠಾಣೆಗಳಿಗೆ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಅವರಿಗೆ ಬೀಳ್ಕೋಡುಗೆ ಸಮಾರಂಭವನ್ನು ನೆರವೇರಿಸಲಾಯಿತು
ರಾಮು ಹೆಗ್ಡೆ , ಮಧುಸೂದನ್, ಸಂತೋಷ್ ಕುಮಾರ್.ಕೆ ಯು , ಅವಿನಾಶ್, ಸಂತೋಷ್ ಕುಮಾರ್ ಇವರುಗಳು ಕುಂದಾಪುರ ಠಾಣೆಯಿಂದ ವರ್ಗಾವಣೆಗೊಂಡಿದ್ದು ರಾಮು ಹೆಗಡೆ ಬೈಂದೂರು ಠಾಣೆಗೆ ಮಧುಸೂದನ್ ಶಂಕರ್ ನಾರಾಯಣ ಠಾಣೆಗೆ ಸಂತೋಷ್ ಕುಮಾರ್ ಕೆ.ಯು ಬೈಂದೂರು ಠಾಣೆಗೆ ಅವಿನಾಶ್ ಬ್ರಹ್ಮಾವರ ಪೊಲೀಸ್ ಠಾಣೆಗೆ ಸಂತೋಷ್ ಉಡುಪಿ ನಗರ ಠಾಣೆಗೆ ವರ್ಗಾವಣೆಗೊಂಡಿದ್ದಾರೆ
ಕುಂದಾಪುರ ನಗರ ಪೊಲೀಸ್ ಠಾಣೆಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆಯನ್ನು ಪೊಲೀಸ್ ನಿರೀಕ್ಷಕರಾದ ನಂಜಪ್ಪ ವಹಿಸಿದ್ದರು
ಬೀಳ್ಕೋಡುಗೆ ಸಮಾರಂಭದಲ್ಲಿ ಪೊಲೀಸ್ ಉಪನಿರೀಕ್ಷಕರಾದ ಶ್ರೀಯುತ ನಂಜ ನಾಯಕ್ (ಕಾ. ಸು) ಶ್ರೀಮತಿ ಪುಷ್ಪ ಮತ್ತು ಸಂಚಾರಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಪ್ರಸಾದ್ ಕುಮಾರ್ ಉಪಸ್ಥಿತರಿದ್ದರು ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಆನಂದ್ ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದವಿತ್ತರು

