Home » ಬ್ಯಾಂಕಿಂಗ್ ಮತ್ತು ಸೈಬರ್ ಕ್ರೈಮ್ : ಉಪನ್ಯಾಸ ಕಾರ್ಯಕ್ರಮ
 

ಬ್ಯಾಂಕಿಂಗ್ ಮತ್ತು ಸೈಬರ್ ಕ್ರೈಮ್ : ಉಪನ್ಯಾಸ ಕಾರ್ಯಕ್ರಮ

ಕಾಳಾವರ ಸರಕಾರಿ ಪ್ರಥಮ ದರ್ಜೆ ಕಾಲೇಜು

by Kundapur Xpress
Spread the love

ಕೋಟೇಶ್ವರ : ಶ್ರೀ ಕಾಳಾವರ ವರದರಾಜ ಎಂ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಇಲ್ಲಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ಮಾರ್ಗದರ್ಶನದಲ್ಲಿ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಬ್ಯಾಂಕಿಂಗ್ ಮತ್ತು ಸೈಬರ್ ಕ್ರೈಮ್ಎಂಬ ವಿಷಯದ ಮೇಲೆ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರುಗಳಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಕರ್ನಾಟಕ ಬ್ಯಾಂಕ್‌ನ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಬ್ಯಾಂಕ್‌ನ ಕ್ಲಸ್ಟರ್ ಮುಖ್ಯಸ್ಥರಾದ ವಿಷ್ಣುಮೂರ್ತಿ ಉಪಾಧ್ಯಾಯ ಭಾಗವಹಿಸಿ ಈ ಡಿಜಿಟಲ್ ಯುಗದಲ್ಲಿ ಬ್ಯಾಂಕಿಂಗ್ ವ್ಯವಹಾರ ಮಾಡುವಾಗ ಅತ್ಯಂತ ಜಾಗೃತರಾಗಿರಬೇಕು. ಇಲ್ಲದಿದ್ದಲ್ಲಿ ಗ್ರಾಹಕರು ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ. ಒಂದಿಷ್ಟು ಜಾಗೃತೆ ವಹಿಸಿದಲ್ಲಿ ಆನ್‌ಲೈನ್‌ನಿಂದಾಗುವ ಮೋಸಗಳಿಂದ ತಪ್ಪಿಸಿಕೊಳ್ಳಬಹುದು ಎಂದು ತಿಳಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯರವರು ಮಾತಾನಾಡುತ್ತಾ, ಡಿಜಿಟಲ್ ಕ್ರಾಂತಿಗೊಂಡ ಈ ಯುಗದಲ್ಲಿ ಎಚ್ಚರವಿಲ್ಲದ ಒಂದು ಹೆಜ್ಜೆ ಆರ್ಥಿಕ ನಷ್ಟಕ್ಕೆ ದಾರಿಯಾಗುವುದು ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಬ್ಯಾಂಕ್ ಹಂಗಳೂರು ಶಾಖೆಯ ಪ್ರಬಂಧಕರಾದ ಪ್ರಮೋದ ಕುಲಕರ್ಣಿಯವರು  ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಶೇಖರ ಬಿ. ಕಾರ್ಯಮವನ್ನು ಸಂಘಟಿಸಿ ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕರಾದ ನಾಗರಾಜ ಯು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ನಾಗರಾಜ ವೈದ್ಯ ಎಂ ಕಾರ್ಯಕ್ರಮದಲ್ಲಿ, ವಿದ್ಯಾರ್ಥಿ ಪ್ರತಿನಿಧಿಯಾಗಿ ನಾಗರಾಜ ಸೋಮಯ್ಯ ನಾಯ್ಕ ಉಪಸ್ಥಿತರಿದ್ದರು. ಅಂತಿಮ ಬಿ.ಕಾಂ.ನ ಅಮೃತ ವಂದಿಸಿದರು. ಅಂಜಲಿ ಮತ್ತು ತಂಡ ಪ್ರಾರ್ಥಿಸಿದ  ಕಾರ್ಯಕ್ರಮವನ್ನು ಅಂತಿಮ ಬಿ.ಕಾಂ. ವಿದ್ಯಾರ್ಥಿನಿ ದಿವ್ಯಶ್ರೀ ನಿರೂಪಣೆ ಮಾಡಿದರು.

 

Related Articles

error: Content is protected !!