Home » ಕೊಲ್ಲೂರು : ಮಾಹಿತಿ ಪಡೆದ ಪ್ರಧಾನಿ ಕಚೇರಿ
 

ಕೊಲ್ಲೂರು : ಮಾಹಿತಿ ಪಡೆದ ಪ್ರಧಾನಿ ಕಚೇರಿ

by Kundapur Xpress
Spread the love

ಬೈಂದೂರು : ದೇಶದ ಪ್ರಸಿದ್ಧ ಶಕ್ತಿ ಪೀಠಗಳಲ್ಲಿ ಒಂದಾದ ಕೊಲ್ಲೂರು ಶ್ರೀ ಮೂಕಾಂಬಿಕ  ದೇವಸ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸಬೇಕು ಎಂಬ ಬಿಜೆಪಿ ಕಾರ್ಯಕರ್ತರ ಕೂಗು ರಾಷ್ಟ್ರ ರಾಜಧಾನಿ ದಿಲ್ಲಿಗೂ ತಲುಪಿದ್ದು ಸ್ವತಃ ಪ್ರಧಾನಿ ಕಾರ್ಯಾಲಯದಿಂದ ಬೈಂದೂರು ಶಾಸಕರಿಗೆ ಕರೆ ಮಾಡಿ ಕೊಲ್ಲೂರಿನ ಸಂಕಲ್ಪದ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರಿಗೆ ಬೈಂದೂರಲ್ಲಿ ಒಂದು ಲಕ್ಷ ಮತಗಳ ಮುನ್ನಡೆ ಕಳಿಸಿಕೊಟ್ಟರೆ ಮೋದಿಯವರನ್ನು ಕರೆಸುವುದಾಗಿ ರಾಘವೇಂದ್ರ ಭರವಸೆ ನೀಡಿದ್ದರು.

ಈ ಬಗ್ಗೆಶಾಸಕ ಗುರುರಾಜ್ ಗಂಟಿಹೊಳೆ ಸುದ್ದಿಗಾರರೊಂದಿಗೆ ಮಾತನಾಡಿ, ನಮೋ ಆ್ಯಪ್ ಮೂಲಕ ನಮ್ಮ ಸಂಕಲ್ಪವನ್ನು ಪ್ರಸ್ತಾವಿಸಿದ್ದು, ಆದರಂತೆ ಪ್ರಧಾನಿ ಕಾರ್ಯಲಯ ಕರೆ ಮಾಡಿ ಮಾಹಿತಿ ಕೇಳಿದೆ. ಕಾಶಿ ಕಾರಿಡಾರ್‌ನಂತೆ ಕೊಲ್ಲೂರು ಕಾರಿಡಾರ್ ರೀತಿ ಅಭಿವೃದ್ಧಿ ಆಗಬೇಕು ಹಾಗೂ ಕೊಲ್ಲೂರು ಪ್ರಾಧಿಕಾರ ರಚಿಸಬೇಕು ಎಂಬ ನಮ್ಮ ಬೇಡಿಕೆಯನ್ನು ಈ ವೇಳೆ ತಿಳಿಸಲಾಗಿದೆ ಎಂದು ತಿಳಿಸಿದರು

   

Related Articles

error: Content is protected !!