Home » ಗಿಡ ನಡುವುದನ್ನೆ ಹವ್ಯಾಸವಾಗಿಸಿಕೊಳ್ಳಿ
 

ಗಿಡ ನಡುವುದನ್ನೆ ಹವ್ಯಾಸವಾಗಿಸಿಕೊಳ್ಳಿ

- ನಿತ್ಯಾನಂದ ಶ್ಯಾನುಭಾಗ್

by Kundapur Xpress
Spread the love

ಕೋಟ: ಗಿಡ ನಡುವ ಹವ್ಯಾಸ ಎಳೆ ವಯಸ್ಸಿನಲ್ಲೆ ಮೂಡಬೇಕು ಆಗ ಇಡೀ ಪರಿಸರವನ್ನು ಹಸಿರು ಕ್ರಾಂತಿ ಮಾಡಲು ಸಾಧ್ಯ ಎಂದು ಉದ್ಯಮಿ ನಿತ್ಯಾನಂದ ಶ್ಯಾನುಭಾಗ್ ಹೇಳಿದರು.

ಪಿ.ಎಂ.ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿತ್ರಪಾಡಿ ಮತ್ತು ಪಾಂಚಜನ್ಯ ಸಂಘ ಪಾರಂಪಳ್ಳಿ, ಹಂದಟ್ಟು ಅಂಬಾಗಿಲುಕೆರೆ ರಸ್ತೆ, ಸಾಲಿಗ್ರಾಮ ಇವರ ಸಹಯೋಗದಲ್ಲಿ ಔಷಧೀಯ ಸಸ್ಯವನ ಉದ್ಘಾಟಿಸಿ ಮಾತನಾಡಿ ಗಿಡಮರದ ಜತೆ ಪ್ರೀತಿವೃದ್ಧಿಸಿ ಆರೋಗ್ಯಯುತ ಜೀವನ ನಡಸಬಹುದು ಅದರ ಜತೆ ಆಯುರ್ವೇದಿಕ್ ಗಿಡಗಳನ್ನು ಪರಿಸರದಲ್ಲಿ ನೆಟ್ಟು ಪೋಷಿಸಿ ಹಿಂದೆ ಆಸ್ಪತ್ರೆಗಳಿಗೆ ತೆರಳುವ ಬದಲು ನಮ್ಮಲ್ಲಿರುವ ಗಿಡಮೂಲಿಕೆ ಔಷಧಗಳನ್ನು ತಯಾರಿಸಿ ಆರೋಗ್ಯಪೂರ್ಣ ಜೀವನವನ್ನು ನಮ್ಮ ಹಿರಿಯರು ಬಳವಳಿಯಾಗಿ ನೀಡಿದ್ದಾರೆ ಆದರೆ ಪ್ರಸ್ತುತ ದಿನಗಳು ಕ್ಲಿಷ್ಟಕರವಾಗಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತುಗಳನ್ನು ಹೇಳಿ ಪರಿಸರಸ್ನೇಹಿ ವಾತಾವರಣ ನಿರ್ಮಿಸಲು ಕರೆ ನೀಡಿದರು.

ಕೋಟ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ.ಮನೋಹರ ಪೂಜಾರಿ ವಿದ್ಯಾರ್ಥಿಗಳಿಗೆ ಗಿಡ ಹಸ್ತಾಂತರಿಸಿ ಪರಿಸರ ಜಾಗೃತಿ ಸಂದೇಶ ನೀಡಿದರು.

ಮುಖ್ಯ ಅತಿಥಿಗಳಾಗಿ ಪಾಂಚಜನ್ಯ ಸಂಘ ಅಂಬಾಗಿಲುಕೆರೆ ಅಧ್ಯಕ್ಷ ಕೃಷ್ಣಮೂರ್ತಿ ಮರಕಾಲ, ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಶಂಕರ ದೇವಾಡಿಗ,ಅಕ್ಷರ ರಥ ಸಮಿತಿ ಅಧ್ಯಕ್ಷ ನಾಗರಾಜ ಗಾಣಿಗ ಸಾಲಿಗ್ರಾಮ ,ಇಕೋ ಕ್ಲಬ್ ನೋಡೆಲ್ ಅಧಿಕಾರಿಗಳಾದ ಗಾಯಿತ್ರಿ,ಸವಿತಾ,ಶಾಲಾ ಹಿಂದಿನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣ ಆಚಾರ್,ಸದಸ್ಯರಾದ ಅನಿತಾ ಮತ್ತು ಅಧ್ಯಾಪಕವೃಂದ,ಶಾಲಾ ಎಸ್ ಡಿ ಎಂಸಿ ಪದಾಧಿಕಾರಿಗಳು ,ಸದಸ್ಯರು ಉಪಸ್ಥಿತರಿದ್ದರು.ಶಾಲಾ ಮುಖ್ಯೋಪಾಧ್ಯಾಯ ಶಾಲಿನಿ ಸ್ವಾಗತಿಸಿದರು.ಕಾರ್ಯಕ್ರಮವನ್ನು ಶಾಲಾ ದೈಹಿಕ ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ನಿರ್ವಹಿಸಿದರು

 

Related Articles

error: Content is protected !!