ಕೋಟ : ಸಮಾಜದಲ್ಲಿ ಹಲವು ರೀತಿಯ ಸಮಾಜಸೇವೆಗಳನ್ನು ಕಾಣುತ್ತೇವೆ ಆದರೆ ಪಂಚವರ್ಣ ಸಂಘಟನೆ ನಿತ್ಯನಿರಂತರ ಸಮಾಜಿಕ ಕಾರ್ಯಕ್ರಮಗಳು ಜನಮನ್ನಣೆಯನ್ನು ಗಳಿಸಿದೆ, ಅಲ್ಲದೆ ಅವರ ಪರಿಸರಸ್ನೇಹಿ ಕಾರ್ಯಕ್ರಮಗಳು ಸಮಾಜದ ಎಲ್ಲಾ ಜನರ ಮನವನ್ನು ಗೆದ್ದಿದೆ ಎಂದು ಕೋಟದ ಸಮಾಜಸೇವಕಿ ಪ್ರೇಮ ಆರ್ ಶೆಟ್ಟಿ ಹೇಳಿದರು.
ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್ ,ಹಂದಟ್ಟು ಮಹಿಳಾ ಬಳಗ ಕೋಟ ,ಜೆಸಿಐ ಕೋಟ ಸಿನಿಯರ್ ಲಿಜನ್ ಸಹಯೋಗದೊಂದಿಗೆ ಕೋಟ ಗ್ರಾಮಪಂಚಾಯತ್ ,ಎಸ್ ಎಲ್ ಆರ್ ಎಂ ಘಟಕ ಸಂಯೋಜನೆಯೊಂದಿಗೆ 242 ಪರಿಸರಸ್ನೇಹಿ ಅಭಿಯಾನ ಕೋಟ ಗ್ರಾ.ಪಂ ರಾಷ್ಟ್ರೀಯ ಹೆದ್ದಾರಿ ಸ್ವಚ್ಛತೆ,ನೆಟ್ಟ ಗಿಡಗಳಿಗೆ ನೀರುಣಿಸು ಕಾಯಕ ಕಾರ್ಯಕ್ರಮದಲ್ಲಿ ಮಾತನಾಡಿ ಸಮಾಜ ಹಾಗೂ ಪರಿಸರ ಶುಚಿತ್ವದ ಬಗ್ಗೆ ವಿಶೇಷ ಕಾಳಜಿ,ಮಹಾತ್ಮ ಗಾಂಧಿ ಕನಸಿನ,ಪ್ರಧಾನಮಂತ್ರಿಗಳ ಸ್ವಚ್ಛತಾ ಅಭಿಯಾನ ಮುನ್ನುಡಿ ಬರೆಯುತ್ತಿರುವುದು ಹೊಸ ಅಧ್ಯಾಯಕ್ಕೆ ಇಂಬು ನೀಡುವಂತ್ತಾಗಿದೆ.ಇಂಥಹ ಸಂಘಟನೆಗಳು ಕೇರಿ ಕೇರಿಗಳಲ್ಲಿ ಹುಟ್ಟಿ ಊರ ಅಭಿವೃದ್ಧಿ ಕಾಣುವಂತ್ತಾಗಲಿ ಎಂದು ಹಾರೈಸಿದರು.
ಇದೇ ವೇಳೆ ಪ್ರತಿ ಭಾನುವಾರದ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿರುವ ತೆಕ್ಕಟ್ಟೆ ಕುವೆಂಪು ಮಾದರಿ ಶಾಲೆಯ ಇರ್ವರು ವಿದ್ಯಾರ್ಥಿಗಳಾದ ಸಾನಿಕಾ ಆಚಾರ್ ಹಾಗೂ ನವನೀತ ಜೋಗಿ ಇವರುಗಳನ್ನು ತೆಕ್ಕಟ್ಟೆ ಎಸ್ ಎಲ್ ಆರ್ ಎಂ ಘಟಕದ ಸಂಯೋಜಕಿ ರೇವತಿ ತೆಕ್ಕಟ್ಟೆ ಹಾಗೂ ಪ್ರೇಮ ಆರ್ ಶೆಟ್ಟಿ ಬಹುಮಾನ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಜನತಾ ಸಂಸ್ಥೆಯ ವ್ಯವಸ್ಥಾಪಕ ಶ್ರೀನಿವಾಸ ಕುಂದರ್,ಪAಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ,ಕಾರ್ಯಾಧ್ಯಕ್ಷೆ ಕಲಾವರಿ ಅಶೋಕ್,ಪಂಚವರ್ಣ ಯುವಕ ಮಂಡಲದ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್,ಕಾರ್ಯಾಧ್ಯಕ್ಷ ಶಶಿಧರ ತಿಂಗಳಾಯ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ನಿರ್ವಹಿಸಿ ಸಂಯೋಜಿಸಿದರು

