Home » ಸ್ವಚ್ಛತಾ ಅಭಿಯಾನಕ್ಕೆ ಪಂಚವರ್ಣ ಹೊಸ ಭಾಷ್ಯ
 

ಸ್ವಚ್ಛತಾ ಅಭಿಯಾನಕ್ಕೆ ಪಂಚವರ್ಣ ಹೊಸ ಭಾಷ್ಯ

ವಿದ್ಯಾ ಎಸ್ ಸಾಲಿಯಾನ್

by Kundapur Xpress
Spread the love

ಕೋಟ : ಸ್ವಚ್ಛತಾ ಅಭಿಯಾನದಲ್ಲಿ ಪಂಚವರ್ಣ ಸಂಸ್ಥೆ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯುತ್ತಿದೆ ಎಂದು ಕೋಟತಟ್ಟು ಗ್ರಾಮಪಂಚಾಯತ್ ಸದಸ್ಯೆ ವಿದ್ಯಾ ಎಸ್ ಸಾಲಿಯಾನ್ ಹೇಳಿದರು
ಕೋಟತಟ್ಟು ಪಡುಕರೆ ಬೀಚ್‌ನಲ್ಲಿ ಕೋಟ ಪಂಚವರ್ಣ ಯುವಕ ಮಂಡಲ ,ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಹಂದಟ್ಟು ಮಹಿಳಾ ಬಳಗ ಕೋಟ,ಮಣೂರು ಫ್ರೆಂಡ್ಸ್ ,ಜೆಸಿಐ ಸಿನಿಯರ್ ಲಿಜನ್ ಕೋಟ ಇವರುಗಳ ಸಹಯೋಗದೊಂದಿಗೆ ಪರಿಸರಸ್ನೇಹಿ ಅಭಿಯಾನಕ್ಕೆ ೨೩೫ನೇ ಭಾನುವಾರದ ಸಂಭ್ರಮದ ಕಾರ್ಯಕ್ರಮದಕ್ಕೆ ಚಾಲನೆ ನೀಡಿ ಮಾತನಾಡಿ ಸಮಾಜದ ಬಗ್ಗೆ ಕಳಕಳಿಯ ಕಾರ್ಯಕ್ರಮಗಳನ್ನಲ್ಲದೆ ಪರಿಸರದ ಬಗ್ಗೆ ಆ ಸಂಸ್ಥೆಗಿರುವ ಕಾಳಜಿಯುಕ್ತ ಕಾರ್ಯಕ್ರಮ ನಿರಂತರ ಸ್ವಚ್ಛತಾ ಅಭಿಯಾನ ಇಡೀ ವ್ಯವಸ್ಥೆಗೆ ನಿಬ್ಬೆರಗಾಗುವಂತೆ ಮಾಡಿದೆ ಇಂತಹ ಸಂಘಟನೆಗಳ ನಮ್ಮ ವ್ಯವಸ್ಥೆಗೆ ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಸುಮಾರು ೩೦ಕ್ಕೂ ಅಧಿಕ ಚೀಲ ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯಗಳನ್ನು ಸಮುದ್ರ ತಟದಿಂದ ಮುಕ್ತಿಗೊಳಿಸಲಾಯಿತು.
ಕೋಟ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್,ಮಣೂರು ಫ್ರೆಂಡ್ಸ್ ಮಾಜಿ ಅಧ್ಯಕ್ಷ ದಿನೇಶ್ ಆಚಾರ್,ಪಂಚವರ್ಣದ ಸಂಘಟನಾಕಾರ್ಯದರ್ಶಿ ಗಿರೀಶ್ ಆಚಾರ್,ಜೆಸಿಐ ಸಿನಿಯರ್ ಲಿಜನ್ ಅಧ್ಯಕ್ಷ ಕೇಶವ ಆಚಾರ್,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ,ಕಾರ್ಯಾಧ್ಯಕ್ಷೆ ಕಲಾವತಿ,ಕಾರ್ಯದರ್ಶಿ ವಸಂತಿ ಹಂದಟ್ಟು, ಸಂಚಾಲಕಿ ಸುಜಾತ ಬಾಯರಿ, ಮತ್ತಿತರರು ಇದ್ದರು.ಮಾಜಿ ಅಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.

 

Related Articles

error: Content is protected !!