ಪಾಂಡೇಶ್ವರ- ಶ್ರೀ ಕ್ಷೇತ್ರ ಕಳಿಬೈಲ್ ತುಳಸಿ ಅಮ್ಮ ಶಿರಸಿ ಮಾರಿಕಾಂಬೆ ಗೆಂಡೋತ್ಸವ ಮತ್ತು ನೇಮೋತ್ಸವ ಕಾರ್ಯಕ್ರಮ
ಕೋಟ: ಇಲ್ಲಿನ ಸಾಸ್ತಾನದ ಪಾಂಡೇಶ್ವರ ಮೂಡಹಡು ಶ್ರೀ ಕ್ಷೇತ್ರ ಕಳಿಬೈಲ್ ತುಳಸಿ ಅಮ್ಮ ಶಿರಸಿ ಮಾರಿಕಾಂಬೆ ಪಂಜುರ್ಲಿ ಮತ್ತು ಸ್ವಾಮಿ ಕೊರಗಜ್ಜ ಸಪರಿವಾರ ದೈವಸ್ಥಾನ ಇದರ ಗೆಂಡೋತ್ಸವ ಮತ್ತು ನೇಮೋತ್ಸವ ಕಾರ್ಯಕ್ರಮದ ಅಂಗವಾಗಿ ಶನಿವಾರ ಪೂರ್ವಾಹ್ನ ೬. ರಿಂದ ಶ್ರೀ ವೇದಮೂರ್ತಿ ನಾಯರಬೆಟ್ಟು ರಮೇಶ್ ಭಟ್ ಇವರ ನೇತೃತ್ವದಲ್ಲಿ ಶ್ರೀ ತುಳಸಿ ಅಮ್ಮನ ಶಿಲಾಮಯ ಬಿಂಬ ಪ್ರತಿಷ್ಠೆ , ನವಕ ಪ್ರಧಾನ ಆದಿವಾಸ ಹೋಮ, ಕಲಶಾಭಿಷೇಕ ಪ್ರಸಾದ ವಿತರಣೆ,ಮಧ್ಯಾಹ್ನ ಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಅಪರಾಹ್ನ ೨ ರಿಂದ ನೇಮೋತ್ಸವದ ಚಪ್ಪರದ ಮುಹೂರ್ತ,೩ರಿಂದ ಭಂಡಾರ ಇಳಿಯುವುದು ಕಳಿಬೈಲ್ ನೇಮೋತ್ಸವ ,ಯಕ್ಷಿ ಕೋಲ ಸೇವೆ,ಪಂಜುರ್ಲಿ , ಗುರಮ್ಮ ಕೋಲ ಸೇವೆ,ಮಲಸಾವರಿ ಆಕಾಶರಾಹು ಕೋಲ ಸೇವೆ,ಕಳಿಬೈಲ್ ಕೊರಗಜ್ಜ ಕೋಲ ಸೇವೆ,ಸಂಜೆ ೬.ಕ್ಕೆ ಶಿರಸಿ ಅಮ್ಮನ ದರ್ಶನ ಸೇವೆ,ರಾತ್ರಿ ಗೆಂಡದ ಮಾಸ್ತಿ ಅಮ್ಮನ ದರ್ಶನ ಸೇವೆ ಗೆಂಡೋತ್ಸವ ಕಾರ್ಯಕ್ರಮಗಳು ಸಂಪನ್ನಗೊAಡವು.ದೈವಸ್ಥಾನದ ಅಧ್ಯಕ್ಷ ಎಂ.ಸಿ ಚಂದ್ರಶೇಖರ್ ,ಪ್ರಧಾನ ಅರ್ಚಕ ಅಭಿಜಿತ್ ಪಾಂಡೇಶ್ವರ, ದೇವಸ್ಥಾನದ ಪ್ರಧಾನ ಪಾತ್ರಿ ನವೀನ್ ಗುರುಗಳು ಉಪಸ್ಥಿತರಿದ್ದರು.
ಇಂದು ಮೇ.೪ರ ಭಾನುವಾರ ವಾರ್ಷಿಕ ಮಾರಿ ಪೂಜೆ,ಬೆಳಿಗ್ಗೆ ೧೦:೦೦ಕ್ಕೆ ಪಂಜುರ್ಲಿ ದೈವದ ದರ್ಶನ ಸೇವೆ ಮಧ್ಯಾಹ್ನ ೨:೦೦ಕ್ಕೆ ತುಳಸಿ ಅಮ್ಮನ ದರ್ಶನ ಸೇವೆ ಶ್ರೀ ಮಳಿಯಾಳಿ ಭಂಗಿ ಅಜ್ಜನ ದರ್ಶನ ಸೇವೆ,ಹುಲಿದುರ್ಗಿ ಅಮ್ಮನ ದರ್ಶನ ಸೇವೆ,ಸಂಜೆ ೪.ರಿಂದ ಶಿರಸಿ ಮಾರಿಕಾಂಬೆ ದರ್ಶನ ಸೇವೆ,ಮಾರಿಪೂಜೆ ರಾತ್ರಿ ೭.ಕ್ಕೆ ಸ್ವಾಮಿ ಕೊರಗಜ್ಜನ ದರ್ಶನ ಸೇವೆ ನಡೆಯಲಿದೆ
ಶ್ರೀ ಕ್ಷೇತ್ರ ಕಳಿಬೈಲ್ ತುಳಸಿ ಅಮ್ಮ ಶಿರಸಿ ಮಾರಿಕಾಂಬೆ ಪಂಜುರ್ಲಿ ಮತ್ತು ಸ್ವಾಮಿ ಕೊರಗಜ್ಜ ಸಪರಿವಾರ ದೈವಸ್ಥಾನ ಇದರ ಗೆಂಡೋತ್ಸವ ಮತ್ತು ನೇಮೋತ್ಸವ ಕಾರ್ಯಕ್ರಮಗಳು ಸಂಪನ್ನಗೊAಡಿತು.

