Home » ಮುಂದಿನ ಭವಿಷ್ಯಕ್ಕಾಗಿ ಪರಿಸರ ಉಳಿಸಿ ಬೆಳೆಸಿ
 

ಮುಂದಿನ ಭವಿಷ್ಯಕ್ಕಾಗಿ ಪರಿಸರ ಉಳಿಸಿ ಬೆಳೆಸಿ

by Kundapur Xpress
Spread the love

ಕೋಟ : ಪರಿಸರದ ಬಗ್ಗೆ ಪ್ರತಿಯೊಬ್ಬರು ಜಾಗೃತಿ ವಹಿಸಿವ ಅವಶ್ಯತೆ ಇದೆ ಈ ಮೂಲಕ ಮುಂದಿನ ಪೀಳಿಗೆಗಾಗಿ ನಾವೆಲ್ಲರು ಗಿಡ ನೆಟ್ಟು ಪರಿಸರ ಸ್ವಚ್ಛವಾಗಿರಿಸಲು ಪಣತೊಡೋಣ ಎಂದು ಪತ್ರಕರ್ತ ರವೀಂದ್ರ ಕೋಟ ಹೇಳಿದರು.
ಇತ್ತೀಚಿಗೆ ಕೋಟದ ವಿವೇಕ ವಿದ್ಯಾಸಂಸ್ಥೆಯ ಸ್ವರ್ಣಭವನದಲ್ಲಿ ರೋಟರಿ ಕ್ಲಬ್ ಕೋಟ ಸಿಟಿ ವತಿಯಿಂದ ವಾರದ ವಿಶೇಷ ಸಭೆಯಲ್ಲಿ ವಿಶೇಷ ಅತಿಥಿಯಾಗಿ ಉಪನ್ಯಾಸ ನೀಡಿದ ಅವರು ಪ್ರಸ್ತುತ ಕಾಲಘಟ್ಟದಲ್ಲಿ ಅತಿಯಾಗಿ ಬಳಕೆಮಾಡುತ್ತಿರುವ ಪ್ಲಾಸ್ಟಿಕ್ ಹಾಗೂ ಇನ್ನಿತರ ತ್ಯಾಜ್ಯಗಳಿಂದ ಮನುಕುಲದ ಮೇಲೆವ್ಯತಿರಿಕ್ತ ಪರಿಣಾಮ ಎದುರಿಸುತ್ತಿದ್ದೇವೆ,ಹಚ್ಚ ಹಸುರಿನ ಪ್ರಕೃತಿಯನ್ನು ಪ್ರವಾಸೋದ್ಯಮದ ನೆಪದಲ್ಲಿ ಹಾಳುಗೆಡವುತ್ತಿದ್ದೇವೆ ಇದರಿಂದ ಪ್ರಸ್ತುತ ತಾಪಮಾನ,ಪ್ರಾಕೃತಿಕ ವಿಕೋಪಗಳನ್ನು ಎದುರಿಸುವಂತ್ತಾಗಿದೆ ಇದೇ ರೀತಿ ಮುಂದುವರೆದರೆ ನಮ್ಮ ಅವನತಿ ಕಟ್ಟಿಟ್ಟಬುತ್ತಿ ಎಂದರಲ್ಲದೆ ಪರಿಸರಕ್ಕಾಗಿ ಇಂದಿನಿಂದಲೇ ಜಾಗೃತರಾಗೋಣ ಆ ಮೂಲಕ ಮಾಲಿನ ರಹಿತ ಪರಿಸರ ನಮ್ಮದಾಗಿಸಿಕೊಳ್ಳೋಣ ಎಂದು ಕರೆ ನೀಡಿದರು.ಇದೇ ವೇಳೆ ರೋಟರಿ ಕ್ಲಬ್ ವತಿಯಿಂದ ಪತ್ರಕರ್ತ ರವೀಂದ್ರ ಕೋಟ ಇವರನ್ನು ಗೌರವಿಸಲಾಯಿತು.ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಕೋಟ ಸಿಟಿ ಅಧ್ಯಕ್ಷ ಅನಿಲ್ ಸುವರ್ಣ ವಹಿಸಿದ್ದರು.ರೋಟರಿ ಕ್ಲಬ್ ಕಾರ್ಯದರ್ಶಿ ಪ್ರಕಾಶ್ ಪೂಜಾರಿ,ಹಾಗೂ ರೋಟರಿ ಮಾಜಿ ಜಿಲ್ಲಾ ಸಹಾಯಕ ಗರ್ವನರ್ ಸತೀಶ್ ಶೆಟ್ಟಿ, ಮುಂದಿನ ಸಹಾಯಕ ಗವರ್ನರ್ ಶ್ಯಾಮಸುಂದರ್ ನಾಯರಿ,ಆನ್ಸ್ ಕ್ಲಬ್ ಅಧ್ಯಕ್ಷೆ ರೇವತಿ ಎಸ್ ನಾಯರಿ , ಮಾಜಿ ಅಧ್ಯಕ್ಷರಾದ ಗಣೇಶ್ ಯು,ವಲಯ ಸೇನಾನಿ ನಿತ್ಯಾನಂದ್ ನಾಯರಿ,ಗೌರವ ಸದಸ್ಯರಾದ ಲಂಭೋದರ ಹೆಗಡೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.ರೋಟರಿ ಕ್ಲಬ್ ಮಾಜಿ ಸಹಾಯಕ ಗವರ್ನರ್ ಚಂದ್ರಶೇಖರ್ ಮೆಂಡನ್ ಪರಿಚಯಿಸಿ ನಿರೂಪಿಸಿದರು.ಮಾಜಿ ಅಧ್ಯಕ್ಷ ದಯಾನಂದ್ ಆಚಾರ್ ಸ್ವಾಗತಿಸಿದರು ನಿರೂಪಿಸಿದರು.ಮಾಜಿ ಅಧ್ಯಕ್ಷ ಸುರೇಶ್ ಆಚಾರ್ ವಂದಿಸಿದರು.

   

Related Articles

error: Content is protected !!