Home » ಪೂರ್ವ ದ್ವೇಷಕ್ಕಾಗಿ ನಾಯಿಗೆ ವಿಷ
 

ಪೂರ್ವ ದ್ವೇಷಕ್ಕಾಗಿ ನಾಯಿಗೆ ವಿಷ

by Kundapur Xpress
Spread the love

ಮಂಗಳೂರು : ಪೂರ್ವ ದ್ವೇಷಕ್ಕಾಗಿ ಡಾಬರ್ ಮ್ಯಾನ್ ಸಾಕು ನಾಯಿಗೆ ವಿಷ ಹಾಕಿ ಕೊಂದ ಅನಾಗರಿಕ ಘಟನೆ ಮಂಗಳೂರಿನಲ್ಲಿ ನಡೆದಿದೆ ಮಂಗಳೂರು ಕಾಫಿಕಾಡ್‌ 4 ನೇ ಕ್ರಾಸ್ನ ವ್ಯಕ್ತಿಯೊಬ್ಬರು ಕಳೆದ ನಾಲ್ಕುವರೆ ವರ್ಷದಿಂದ ಡಾಬರ್ ನಾಯಿ ಸಾಕಿದ್ದರು. ಜುಲೈ 24 ರಂದು ನೆರೆಮನೆಯ ಭೀಮಯ್ಯ ಎಂಬುವರು ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ನಾಯಿಗೆ ವಿಷ ಪದಾರ್ಥ ಹಾಕಿದ್ದಾರೆಂದು ಆರೋಪಿಸಲಾಗಿದೆ ಪರಿಣಾಮ ಜುಲೈ 25 ರಂದು ನಾಯಿಯು ರಕ್ತ ವಾಂತಿ ಮಾಡಿ ಸಾವನ್ನಪ್ಪಿದೆ

ನಾಯಿ ಸಾವಿಗೆ ಕಾರಣ ಆದ ಭೀಮಯ್ಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಸಾಕು ನಾಯಿ ಯಜಮಾನ ಊರ್ವ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ

ನಿಯತ್ತು ಎಂದರೆ ನಾಯಿ ನಾಯಿ ಎಂದರೆ ನಿಯತ್ತು ಎಂಬ ಮಾತಿದೆ ಹೀಗಿರುವಾಗ ಈ ಮೂಕ ಪ್ರಾಣಿಯ ಮೇಲೆ ನಡೆದ ಕೃತ್ಯ ಅಮಾನುಷವಾಗಿದೆ ಎಂದು ಮಿತ್ರರೊಬ್ಬರು ತಿಳಿಸಿದ್ದಾರೆ

   

Related Articles

error: Content is protected !!