Home » ಪೂರ್ಣಪ್ರಜ್ಞ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಸಮಾರೋಪ ಸಮಾರಂಭ
 

ಪೂರ್ಣಪ್ರಜ್ಞ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಸಮಾರೋಪ ಸಮಾರಂಭ

by Kundapur Xpress
Spread the love

ಉಡುಪಿ : ರಾಷ್ಟ್ರೀಯ ಸೇವಾ ಯೋಜನೆ ಪೂರ್ಣಪ್ರಜ್ಞ ಕಾಲೇಜು, ಉಡುಪಿ ಇದರ 7 ದಿನದ “ವಾರ್ಷಿಕ ವಿಶೇಷ ಶಿಬಿರ” ಸುಭೋದಿನಿ ಹಿರಿಯ ಪ್ರಾಥಮಿಕ ಶಾಲೆ ಅಲೆವೂರು ಇಲ್ಲಿ ನಡೆಯುತ್ತಿದ್ದು, ಇದರ ಸಮಾರೋಪ ಸಮಾರಂಭದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದರು.

ಶಾಸಕರು ಮಾತನಾಡಿ ಮಕ್ಕಳಿಗೆ ಸಂಸ್ಕಾರ ಅಗತ್ಯವಿದೆ ಜೊತೆಗೆ ರಾಷ್ಟ್ರೀಯ ಸೇವಾ ಯೋಜನೆಯಿಂದ ವಿದ್ಯಾರ್ಥಿಗಳು ಕಲಿಯಲು ಬಹಳಷ್ಟಿದೆ. 7 ದಿನಗಳಲ್ಲಿ ನೀವು ಕಲಿತಿರುವುದನ್ನು ಜೀವನದಕ್ಕೂ ಅಳವಡಿಸಿಕೊಳ್ಳಿ ಯಶಸ್ಸು ನಿಮ್ಮದಾಗಲಿದೆ ಎಂದರು.

ಈ ಸಂದರ್ಭದಲ್ಲಿ ಅಲೆವೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಅಮೃತ ಯು ಪೂಜಾರಿ, ಅಲೆವೂರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಕಾಂತ್ ನಾಯಕ್, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಶೇಖರ್ ಆಚಾರ್ಯ ನಿವೃತ್ತ ಮುಖ್ಯಪಾದ್ಯಯರು ವಾರಿಜ ಶೇಡ್ತಿ, ಡಾ. ರಾಮು ಎಲ್ ಪ್ರಾಂಶುಪಾಲರು ಪೂರ್ಣಪ್ರಜ್ಞ ಕಾಲೇಜ್ ಉಡುಪಿ, ಪುಷ್ಪಲತಾ ಬಿ ಎಸ್ ಶಾಲಾ ಮುಖ್ಯೋಪಾಧ್ಯಾಯರು, ಪುಂಡರೀಕಾಕ್ಷ ಕೊಡಂಚ ಆಡಳಿತಾಧಿಕಾರಿಗಳು ಪೂರ್ಣಪ್ರಜ್ಞ ಕಾಲೇಜು ಉಡುಪಿ, ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಡಾ. ನಾಗರಾಜ್ ಜಿ.ಪಿ ಹಾಗೂ ಶ್ರೀಮತಿ ಸುಪರ್ಣ,ರಾಷ್ಟ್ರೀಯ ಸೇವಾ ಯೋಜನೆಯ ಸಹ ಯೋಜನಾಧಿಕಾರಿಗಳಾದ ಮಹೇಶ್ ಶೆಟ್ಟಿ, ಕುಮಾರಿ ಸ್ವಾತಿ, ಶ್ರೀಮತಿ ಸ್ವಾತಿ ಪಿ.ಕೆ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

 

Related Articles

error: Content is protected !!