ಕೋಟ : ಇಲ್ಲಿನ ಕೋಟದ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇಗುಲದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ನಡೆದ ರಥೋತ್ಸವ ಕಾರ್ಯಕ್ರಮ ವೈಭವಪೂರಿತವಾಗಿ ಜರಗಿತು.
ಈ ವೇಳೆ ವಿವಿಧ ಭಜನಾ ತಂಡಗಳು ಸೇರಿದಂತೆ ವಿವಿಧ ಟಾಬ್ಲೋಗಳು ಭಾಗವಹಿಸಿದ್ದು ಸ್ವಯಂ ಸೇವಕರ ಮೂಲಕ ಈ ತಂಡಗಳಿಗೆ ನೀರಿನ ಬಾಟಲಿಗಳನ್ನು ವ್ಯವಸ್ಥೆ ಕಲ್ಪಿಸಲಾಗಿತ್ತು ಆದರೆ ಆಯಾ ಭಾಗದಲ್ಲಿ ಉಳಿದುಕೊಂಡಿದ್ದ ಪ್ಲಾಸ್ಟಿಕ್ ಬಾಟಲ್ ಸೇರಿದಂತೆ ವಿವಿಧ ವೆಸ್ಟೇಜ್ ಕಸಗಳನ್ನು ಕೋಟದ ಪಂಚವರ್ಣ ಯುವಕ ಮಂಡಲದ ಮಾಜಿ ಅಧ್ಯಕ್ಷ ಅಜಿತ್ ಆಚಾರ್ ಮತ್ತು ತಂಡ ಎರಡು ಚೀಲಗಳನ್ನು ಹಿಡಿದು ರಥೋತ್ಸವ ನಡೆದ ಸುಮಾರು ಅರ್ಧ ಕೀ.ಮೀ ರಸ್ತೆಯಲ್ಲಿ ಉಳಿದ ಪ್ಲಾಸ್ಟಿಕ್ ಬಾಟಲಿಗಳನ್ನು ತೆರವುಗೊಳಿಸಿತು.
ಈ ಕಾರ್ಯಕ್ಕೆ ಸಾಲಿಗ್ರಾಮ ದೇಗುಲ ಟ್ರಸ್ಟಿ ಕೆ.ಅನಂತಪದ್ಮನಾಭ ಐತಾಳ್ ಹಾಗೂ ಶ್ರೀ ಹಿರೇಮಹಾಲಿಂಗೇಶ್ವರ ದೇಗುದ ಮಾಜಿ ಟ್ರಸ್ಟಿ ವಿಜಯ್ ಕುಮಾರ್ ಶೆಟ್ಟಿ,ರೈತಧ್ವನಿ ಸಂಘದ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ ಸಾಥ್ ನೀಡಿದರು. ರಥೋತ್ಸವದಲ್ಲಿ ಭಾಗಿಯಾದ ಭಕ್ತರ ವ್ಯಾಪಕ ಪ್ರಶಂಸೆ ಕೂಡಾ ವ್ಯಕ್ತವಾಯಿತಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಗಳ ಮಹಾಪೂರ ಹರಿದುಬಂದಿದ್ದು ವಿಶೇಷವಾಗಿತ್ತು ,ಕಳೆದ ಏಳು ವರ್ಷಗಳಿಂದ ಪ್ರತಿ ಭಾನುವಾರ ಪಂಚವರ್ಣ ಸಂಘಟನೆ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದೀಗ 241 ಭಾನುವಾರ ಕ್ರಮಿಸಿಕೊಂಡಿದ್ದು ಹೊಸ ದಾಖಲೆಯಾಗಿದೆ.

