ಯತ್ರ ಪೂಜ್ಯಂತೆ……..
ಎಲ್ಲಿ ನಾರಿಯರನ್ನು ಪೂಜಿಸುತ್ತಾರೋ ಆದರದ ಭಾವದಿಂದ ನೋಡಿಕೊಳ್ಳುತ್ತಾರೋ ಅಲ್ಲಿ ದೇವತೆಗಳು ವಾಸವಾಗಿರುತ್ತಾರೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ವಿದ್ಯೆಗೆ ಅಧಿಪತಿ ಹೆಣ್ಣು ಶಾರದಾ ಮಾತೆ, ಸಂಪತ್ತಿಗೆ ಅಧಿಪತಿ ಹೆಣ್ಣು , ಲಕ್ಷ್ಮೀದೇವಿ , ಆಹಾರ ಸಿಗಬೇಕಾದರೆ ಅಧಿಪತಿ ಹೆಣ್ಣು ಮಾತೆ ಅನ್ನಪೂರ್ಣೇಶ್ವರಿ, ಪ್ರಕೃತಿ ಕೂಡ ಹೆಣ್ಣು
ಹೆಣ್ಣು ಸಮಾಜದಲ್ಲಿ ಅತಿ ಮುಖ್ಯವಾದ ಪಾತ್ರವನ್ನು ವಹಿಸುತ್ತಾಳೆ. ತಾಯಿಯಾಗಿ , ಸಹೋದರಿಯಾಗಿ , ಅರ್ಧಾಂಗಿಯಾಗಿ ಸಂಸಾರದಲ್ಲಿ ನೆಲೆಸುತ್ತಾಳೆ. ಪುರಾಣಗಳಲ್ಲಿಯೂ ಹೆಣ್ಣಿಗೆ ಪೂಜ್ಯವಾದಂತಹ ಸ್ಥಾನವಿದೆ. ಆಧುನಿಕ ಸಮಾಜದಲ್ಲಿ ಹೆಣ್ಣು ಗಂಡಸರಿಗೆ ಸರಿಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆಯನ್ನು ಮಾಡಿದ್ದಾಳೆ. ಗಣಿತ ಕ್ಷೇತ್ರದಲ್ಲಿ ಶಕುಂತಲಾ ದೇವಿ , ತಂತ್ರಜ್ಞಾನ ಕ್ಷೇತ್ರದಲ್ಲಿ, ವೈದ್ಯಕೀಯ ಕ್ಷೇತ್ರದಲ್ಲಿ ,ದಾದಿಯರ ಕ್ಷೇತ್ರದಲ್ಲಿ , ಕ್ರೀಡಾಕ್ಷೇತ್ರದಲ್ಲಿ , ಬಾಹ್ಯಾಕಾಶ ಕ್ಷೇತ್ರದಲ್ಲಿ , ಈ ತರಹ ಎಲ್ಲಾ ಕ್ಷೇತ್ರದಲ್ಲೂ ಹೆಣ್ಣು ತನ್ನದೇ ಆದಂತಹ ಸ್ಥಾನವನ್ನು ಪಡೆದಿದ್ದಾಳೆ. ಪ್ರತಿ ಗಂಡಿನ ಯಶಸ್ಸಿನ ಹಿಂದೆ ಒಬ್ಬಳು ಹೆಣ್ಣು ಇರುತ್ತಾಳೆ ಎಂಬ ಮಾತಿದೆ. ಹೆಣ್ಣೆಂದರೆ ಸಂಸಾರದ ಕಣ್ಣು . ಪುರಾಣಗಳಲ್ಲಿ ಪಂಚಪತಿವ್ರತೆಯರ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಪತಿವ್ರತೆಯರ ಶಕ್ತಿಯಿಂದಲೇ ಅವರ ಗಂಡಂದಿರು ಉನ್ನತವಾದ ಸ್ಥಾನ ಪಡೆಯಲು ಸಾಧ್ಯವಾಯಿತೆಂಬುದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ
ಪ್ರದೀಪ್,ಚಿನ್ಮಯಿ ಆಸ್ಪತ್ರೆ ಕುಂದಾಪುರ