ಕುಂದಾಪುರ : ಭಾರತೀಯ ಜನತಾ ಪಾರ್ಟಿಯ ಮುಖಂಡರಾದ ಪ್ರಮೋದ್ ಮಧ್ವರಾಜ್ ರವರು ಕುಂದಾಪುರದ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನವನ್ನು ಪಡೆದರು ಕುಂದಾಪುರ ನಗರದ ಶ್ರೀ ಕುಂದೇಶ್ವರ ದೇವಸ್ಥಾನ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನ ಖಾರ್ವಿಕೇರಿಯ ಮಹಾಂಕಾಳಿ ದೇವಸ್ಥಾನ ಹಾಗೂ ಚಿಕ್ಕನ್ ಸಾಲ್ ರಸ್ತೆಯ ಶ್ರೀ ಮೈಲಾರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಕಳೆದ 6 ತಿಂಗಳ ಹಿಂದೆ ಬಹಿರಂಗವಾಗಿ ಘೋಷಣೆ ಮಾಡಿದ್ದೇನೆ ಒಂದು ವೇಳೆ ಪಕ್ಷ ಬಯಸಿದ್ರೆ ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಾನು ಸ್ಪರ್ಧಿಸಲು ಸಿಧ್ದನಿದ್ದೇನೆ ಹಾಗೇ ಮತ್ತೊಂದು ಪ್ರಕಟಣೆಯನ್ನೂ ನೀಡಿದ್ದೇನೆ ಒಂದು ವೇಳೆ ಪಕ್ಷ ಬೇರೆಯವರಿಗೆ ಟಿಕೆಟ್ ನೀಡಿದರೂ ಕೂಡ ಅವರ ಗೆಲುವಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಮತ್ತು ನನ್ನ ಜೀವನ ಪರ್ಯಂತ ನನ್ನ ಕೊನೆಯ ಉಸಿರು ಇರುವತನಕ ಭಾರತೀಯ ಜನತಾ ಪಾರ್ಟಿಯಲ್ಲಿ ಇರುತ್ತೇನೆ ಎಂದರು
ಕಳೆದ 5-6 ತಿಂಗಳಿನಿಂದ ಚಿಕ್ಕಮಂಗಳೂರು ಜಿಲ್ಲೆಯ ಶೃಂಗೇರಿ ಮೂಡಿಗೆರೆ ತರೀಕೆರಿ ಭಾಗಗಳಲ್ಲಿ ಸಂಚರಿಸಿ ಪ್ರತಿಯೊಂದು ಮಹಾಶಕ್ತಿ ಕೇಂದ್ರ ಶಕ್ತಿ ಕೇಂದ್ರ ಹಾಗೂ ಬೂತ್ ಅಧ್ಯಕ್ಷರು ಮತ್ತು ಕಾರ್ಯಕರ್ತರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದು ಅದರಂತೆ ಇಂದು ಕುಂದಾಪುರಕ್ಕೆ ಬಂದಿದ್ದೇನೆ ಎಂದು ನುಡಿದರು
ಈ ಸಂದರ್ಭದಲ್ಲಿ ಗಿರೀಶ್ ಸಸಿಹಿತ್ಲು ಕೃಷ್ಣಮೂರ್ತಿ.ಯು ವಿಜಯ್ ಕುಮಾರ್ ಭಾಸ್ಕರ್ ಗಾಣಿಗ ಕೆ ಆರ್ ಉಮೇಶ್ ರಾವ್ ಅರುಣ್ ಬಾಣ ಭಾಸ್ಕರ್ ಶ್ರೀನಾಥ್ ಕೋಟೆ ಕೆ ಪಿ ಸುಧೀರ್ ವಿಠ್ಠಲ್ ಮುಂತಾದವರು ಉಪಸ್ಥಿತರಿದ್ದರು

