Home » ಸಾರ್ವಜನಿಕ ಆಡಳಿತ ಸ್ನಾತಕೋತ್ತರ ಪದವಿಯಲ್ಲಿ 11 ನೇ ರಾಂಕ್ ನೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆ
 

ಸಾರ್ವಜನಿಕ ಆಡಳಿತ ಸ್ನಾತಕೋತ್ತರ ಪದವಿಯಲ್ಲಿ 11 ನೇ ರಾಂಕ್ ನೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆ

by Kundapur Xpress
Spread the love

2024-25 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ ನಡೆಸಿದ ಸ್ನಾತಕೋತ್ತರ ಪದವಿ ಪರೀಕ್ಷೆಯ ಸಾರ್ವಜನಿಕ ಆಡಳಿತ ವಿಭಾಗದಲ್ಲಿ ಶ್ರೀ ಪ್ರವೀಣ್ ಡಿ ಕೋಟ್ಯಾನ್ ಪಡುಕೆರೆ ಇವರು ರಾಜ್ಯದಲ್ಲಿ 11 ನೇ ರಾಂಕ್ ನೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ಇವರು ಉದ್ಯಾವರ ಕನಕೊಡ ಮೊಗವೀರ ಸಭೆಯ ಗುರಿಕಾರರಾಗಿದ್ದ ದಿ. ದಯಾಕರ ಕುಂದರ್ ಹಾಗೂ ಸುಂದರಿ ಕೋಟ್ಯಾನ್ ದಂಪತಿಗಳ ಮಗನಾಗಿದ್ದು, ಕಳೆದ 15 ವರ್ಷಗಳಿಂದ ಕರ್ನಾಟಕ ಸರಕಾರದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತ ಪ್ರಸ್ತುತ ಬೈಂದೂರು ಶಾಸಕರಾದ ಶ್ರೀ ಗುರುರಾಜ್ ಶೆಟ್ಟಿ ಗಂಟಿಹೊಳೆ ಯವರ ಆಪ್ತ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

 

Related Articles

error: Content is protected !!