ಕುಂದಾಪುರ : ಯಕ್ಷ ಶಿಕ್ಷಣ ಟ್ರಸ್ಟ್ ಉಡುಪಿ ಪ್ರದರ್ಶನ ಸಂಘಟನಾ ಸಮಿತಿ ಕುಂದಾಪುರ ಇವರ ಆಶ್ರಯದಲ್ಲಿ ಕಿಶೋರ ಯಕ್ಷಗಾನ ಸಂಭ್ರಮ ಜರುಗಿತು ಕುಂದಾಪುರ ಸರಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಸಮಾರಂಭವನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎ.ಕಿರಣ್ ಕುಮಾರ್ ಕೊಡ್ಗಿಯವರು ಉದ್ಘಾಟಿಸಿ ಮಾತನಾಡಿದರು
ಮುಂದಿನ ದಿನದಲ್ಲಿ ಕ್ಷೇತ್ರದ ಎಲ್ಲಾ ಪ್ರೌಢಶಾಲೆಯಗಳಲ್ಲಿ ಯಕ್ಷಗಾನದ ತರಬೇತಿಯನ್ನು ಎಲ್ಲ ಮಕ್ಕಳಿಗೂ ಲಭ್ಯವಾಗಲಿ ಎಂದು ನುಡಿದು ಶುಭ ಹಾರೈಸಿದರು
ಕುಂದಾಪುರದ ತಹಶೀಲ್ದಾರರಾದ ಶ್ರೀಮತಿ ಶೋಭಾ ಲಕ್ಷ್ಮಿ ಮಾತನಾಡಿ ನಮ್ಮ ಕರಾವಳಿ ಭಾಗದ ಹೆಮ್ಮೆಯ ಕಲೆಗಳಾದ
ಯಕ್ಷಗಾನ, ಕೋಲ, ಹುಲಿ ವೇಷ ಕುಣಿತ ಇದನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರು
ಈ ಸಂದರ್ಭದಲ್ಲಿ ವೇದಿಕೆ ಮೇಲ್ಬಾಗದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಶೋಭಾ ಶೆಟ್ಟಿ, ಯಕ್ಷಗಾನ ಕಲಾರಂಗ ಇದರ ಅಧ್ಯಕ್ಷರಾದ ಎಂ ಗಂಗಾಧರಾವ್, ಕುಂದಾಪುರದ ಗೌತಮ್ ಶೆಟ್ಟಿ, ಉದ್ಯಮಿ ಸೂರ್ಯಕಾಂತ್ ದಫೇದಾರ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಾಮಕೃಷ್ಣ ಬಿ.ಜಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು
ಪ್ರದರ್ಶನ ಸಂಘಟನಾ ಸಮಿತಿ ಕುಂದಾಪುರ ಇದರ ಕಾರ್ಯದರ್ಶಿ ಶಂಕರ ಅಂಕದಕಟ್ಟೆ ಸ್ವಾಗತಿಸಿ, ಯಕ್ಷ ಶಿಕ್ಷಣ ಟ್ರಸ್ಟ್ ಉಡುಪಿ ಕಾರ್ಯದರ್ಶಿ ಮುರುಳಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು, ಯಕ್ಷ ಟ್ರಸ್ಟ್ ನ ನಾರಾಯಣ ಹೆಗಡೆ ವಂದಿಸಿದರು ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ರಾಮಶ್ವಮೇಧ ಕಥಾನಕದ ಯಕ್ಷಗಾನ ಪ್ರದರ್ಶನಗೊಂಡಿತು

