204
ಬೆಂಗಳೂರು : ಅಯೋಧ್ಯೆಯ ರಾಮ ಮಂದಿರದಲ್ಲಿ ಸೋಮವಾರ ನಡೆಯಲಿರುವ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕಾಗಿ ಮೂರು ಹಂತದ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಲಕ್ಷಾಂತರ ಭಕ್ತರ ಅದಮ್ಯ ಬಯಕೆಯಾಗಿರುವ ಮಂದಿರಕ್ಕೆ ಆಗಮಿಸುವ ಪ್ರತಿಯೊಬ್ಬರ ಸುರಕ್ಷತೆಗಾಗಿ ಆದ್ಯತೆ ನೀಡಲಾಗಿದೆ
ಅದೇ ರೀತಿ ಮಂದಿರ ಮತ್ತು ಅದರ ಪ್ರಮುಖ ಸ್ಥಾಪನೆಗಳನ್ನು ರಕ್ಷಿಸುವುದಕ್ಕಾಗಿ ವಿಶೇಷ ಭದ್ರತಾ ಪಡೆಯೊಂದಿಗೆ (ಎಸ್.ಎಸ್.ಎಫ್) ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್), ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿ (ಪಿಎಸಿ) ಮತ್ತು ಉತ್ತರ ಪ್ರದೇಶ ಸಿವಿಲ್ ಪೊಲೀಸ್ ನಿಗಾ ಇರಿಸಿವೆ. ಮಂದಿರ ಪ್ರದೇಶದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದ್ದು, ಸುಮಾರು 100 ಎಸ್ ಎಸ್ ಎಫ್ ಕಮಾಂಡೋಗಳನ್ನು ನಿಯೋಜಿಸಲಾಗಿದೆ. ಸಂಭಾವ್ಯ ಭದ್ರತಾ ಬೆದರಿಕೆಗಳು, ಉಗ್ರರ ನಿಗ್ರಹಕ್ಕಾಗಿ ಎನ್ ಎಸ್ ಜಿ ನಿಯೋಜನೆಗೊಂಡಿದ್ದಾರೆ


