Home » ದೇವಾಲಯ ಸ್ಪೋಟಿಸಲು ಸಂಚು
 

ದೇವಾಲಯ ಸ್ಪೋಟಿಸಲು ಸಂಚು

by Kundapur Xpress
Spread the love

ಬೆಂಗಳೂರು: ನಗರದ ಬ್ರೂಕ್ ಫೀಲ್ಡ್‌ನ ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದಲ್ಲಿ ಬಂಧಿತರಾಗಿರುವ ಆರೋಪಿಗಳು, ಮುಂದಿನ ದಿನಗಳಲ್ಲಿ ಹಿಂದು ದೇವಾಲಗಳನ್ನು ಸ್ಫೋಟಿಸುವ ಲೆಕ್ಕಾಚಾರದಲ್ಲಿದ್ದರು ಎನ್ನುವ ಭಯಾನಕ ಸತ್ಯ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿಚಾರಣೆ ಯಲ್ಲಿ ಬಯಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೇ ಬಂಧಿತರು ಹಿಂದುಗಳ ಹೆಸರುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದರು ಎನ್ನುವ ಅಂಶವೂ ಗೊತ್ತಾಗಿದೆ.

ಈ ಪ್ರಕರಣದಲ್ಲಿ ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸುತ್ತಿರುವ ಎನ್‌ಐಎಗೆ ಬಗೆದಷ್ಟೂ ಹೆಚ್ಚಿನ ಮಹತ್ತರ ಸುಳಿವು ಸಿಗುತ್ತಿವೆ. ಬಂಧಿತರು ನಕಲಿ ಐಡಿ ಕಾರ್ಡ್‌ಗಳು ಮತ್ತು ದಾಖಲೆಗಳಲ್ಲಿ ಹಿಂದುಗಳ ಹೆಸರುಗಳನ್ನು ಬಳಸಿ ಎಲ್ಲೆಡೆ ಹೋಟೆಲ್‌ಗಳಲ್ಲಿ ರೂಮ್ ಪಡೆದುಕೊಂಡು ತಲೆಮರೆಸಿಕೊಂಡಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ. ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬಾಂಬರ್ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಮುಸಾವೀರ್ ಹುಸೇನ್ ಶಾಜೀಬ್ ತನ್ನ ಹೆಸರನ್ನು ಯುತಾ ಶಹನವಾಜ್ ಪಟೇಲ್ ಎಂದು ಬದಲಾಯಿಸಿಕೊಂಡರೆ, ಮತ್ತೊಂದೆಡೆ ಮಾಸ್ಟರ್ ಮೈಂಡ್ ಅಬ್ದುಲ್ ಮತೀನ್ ತಾಹಾ ಎನ್ನುವವನು ಅನ್ನೋಲ್ ಕುಲಕರ್ಣಿ ಎಂಬ ಹಿಂದುಗಳ ಹೆಸರಿನಿಂದ ಗುರುತಿಸಿಕೊಂಡಿದ್ದನು. ಇಬ್ಬರೂ ಮಹಾ ರಾಷ್ಟ್ರದಲ್ಲಿ ನಕಲಿ ಹೆಸರಿನಲ್ಲಿ ಐಡಿ ಕಾರ್ಡ್‌ಗಳನ್ನು ಮಾಡಿಸಿಕೊಂಡಿದ್ದರು ಎಂದು ಗೊತ್ತಾಗಿದೆ

   

Related Articles

error: Content is protected !!