189
ಉಡುಪಿ : ಸ್ನೇಹಜೀವಿ ಉಡುಪಿ ಇದರ ಯಕ್ಷಗಾನ/ರಂಗಭೂಮಿ ಕಲಾವಿದರಿಂದ ಮಣಿಪುರ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘ ರಿ. ಇಲ್ಲಿ ನಿನ್ನೆ ಹಮ್ಮಿಕೊಳ್ಳಲಾದ “ಜಾಂಬವತಿ ಕಲ್ಯಾಣ” ಯಕ್ಷಗಾನ ಪ್ರದರ್ಶನಕ್ಕೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಶುಭಹಾರೈಸಿದರು
ಅಶ್ವಿನಿ ಫೈಬರ್ ಡೋರ್ಸ್ ಮಾಲಕರಾದ ಶ್ರೀಧರ್ ಅಮೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಗೀತಾಂಜಲಿ ಸುವರ್ಣ, ಮಣಿಪುರ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜೋನಿ ಸೀಕ್ಟೇರ, ಅಲೆವೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಅಮೃತ, ಮಣಿಪುರ ಸಂಯುಕ್ತ ಪೌಢಶಾಲೆಯ ಮುಖ್ಯಶಿಕ್ಷಕರಾದ ರೂಪರೇಖಾ, ಸ್ನೇಹಜೀವಿ ಉಡುಪಿ ನಿರ್ದೇಶಕರಾದ ಗಣೇಶ್ ರಾವ್ ಉಪಸ್ಥಿತರಿದ್ದರು

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

