ಉಡುಪಿ : ಲೋಕಕಲ್ಯಾಣಕ್ಕಾಗಿ ಅಮೆರಿಕಾದ ಪ್ರಥಮ ದೇವಾಲಯವಾದ ಶ್ರೀ ವೆಂಕಟಕೃಷ್ಣ ಕ್ಷೇತ್ರದಲ್ಲಿ ಒಂಬತ್ತು ದಿನಗಳ ಕಾಲ ನಡೆದ ಸಂಹಿತಾಯಾಗ ರಥೋತ್ಸವ ರಂಗಪೂಜೆಯೊಂದಿಗೆ ವಿದ್ಯುಕ್ತವಾಗಿ ಸಮಾಪನೆಗೊಂಡಿತು ಬೆಳಿಗ್ಗೆ ಶ್ರೀನಿವಾಸ ದೇವರಿಗೆ ಪ್ರಸನ್ನ ಕಲಶಾಭಿಷೇಕ ಪೂಜ್ಯ ಶ್ರೀಪಾದರು ನೆರವೇರಿಸಿದರು
ಬಳಿಕ ಅನೇಕ ಭಕ್ತ ಜನರ ಸಮ್ಮುಖದಲ್ಲಿ ಸಹಸ್ರ ಗಣಪತ್ಯಥರ್ವ ಶೀರ್ಷ ಯಾಗ ಸಂಪನ್ನ ಗೊಂಡಿತು ಸಾಯಂಕಾಲ ಶ್ರೀನಿವಾಸ ದೇವರಿಗೆ ರಂಗಪೂಜೆ ರಥೋತ್ಸವ ನಡೆದು ಶ್ರೀನಿವಾಸನ ಉತ್ಸವಮೂರ್ತಿಯ ಅಟ್ಟೆಪಲ್ಲಕ್ಕಿ ಕುಣಿತ ಜನರ ವಿಶೇಷ ಮೆಚ್ಚುಗೆ ಗೆ ಪಾತ್ರವಾಯಿತು ಈ ಉತ್ಸವದಲ್ಲಿ ಪ್ರಮುಖವಾಗಿ ವಾದನ ಸುತ್ತು ,ಚೆಂಡೆ ಸುತ್ತು ,ಹರಿಭಜನೆ ಸುತ್ತುಗಳ ನರ್ತನ ಗಳಿಂದ ಉಡುಪಿಯ ಭವ್ಯ ಉತ್ಸವಪರಂಪರೆಯನ್ನು ಈ ನೆಲದಲ್ಲಿ ಪರಿಚಯಿಸಿದಂತಾಯಿತು ಪೂಜ್ಯಶ್ರೀಪಾದರು ಈ ಕಾರ್ಯಕ್ರಮಗಳನ್ನು ಚೆನ್ನಾಗಿ ನಿರ್ವಹಿಸಿದ ವೈದಿಕ ವಿದ್ವಾಂಸರನ್ನು ಶಾಲು ಹೊದಿಸಿ ಆಶೀರ್ವದಿಸಿದರು