207
ಮಂಗಳೂರು : ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿ ಅವರನ್ನು ತಾತ್ಕಾಲಿಕ ನೌಕರಿಯಲ್ಲೇ ಮುಂದುವರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿಕೆ ನೀಡಿದ್ದಾರೆ ಈ ಮೂಲಕ ವಿವಾದವನ್ನು ಮೊಳಕೆ ಹಂತದಲ್ಲಿ ಅವರು ಚೂಟಿ ಹಾಕಿದ್ದಾರೆ
ನೂತನ ಕುಮಾರಿಯ ತಾತ್ಕಾಲಿಕ ನೌಕರಿಯನ್ನು ರದ್ದುಗೊಳಿಸಿದ್ದಕ್ಕೆ ಪ್ರತಿಪಕ್ಷ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು ಇದು ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆಯು ಆಗಿತ್ತು ಪರಿಸ್ಥಿತಿಯನ್ನು ಸೂಕ್ತ ಸೂಕ್ಷ್ಮವಾಗಿ ಅವಲೋಕಿದ ಸಿ ಎಂ ಸಿದ್ದರಾಮಯ್ಯ ಕೂಡಲೇ ಮಧ್ಯಪ್ರವೇಶಸಿ ಪ್ರವೀಣ್ ನೆಟ್ಟಾಡು ಪತ್ನಿ ನೂತನ ಕುಮಾರಿ ಇವರಿಗೆ ನೀಡಿದ ತಾತ್ಕಾಲಿಕ ಹುದ್ದೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮಾನವೀಯತೆ ಆಧಾರದಲ್ಲಿ ಮರು ನೇಮಕ ಮಾಡಲಾಗುವುದು ಎಂದು ತಿಳಿಸಿದ್ದಾರೆ

