Home » ಸಂವಿಧಾನ ದೇಶದ ಏಕತೆ ಹಾಗೂ ಹೆಮ್ಮೆಯ ಪ್ರತೀಕ : ಮಹೇಶ್ಚಂದ್ರ
 

ಸಂವಿಧಾನ ದೇಶದ ಏಕತೆ ಹಾಗೂ ಹೆಮ್ಮೆಯ ಪ್ರತೀಕ : ಮಹೇಶ್ಚಂದ್ರ

by Kundapur Xpress
Spread the love

ಕುಂದಾಪುರ: ಸ್ವಾತಂತ್ರ್ಯ, ಸಮಾನತೆ, ಏಕತೆ, ಭ್ರಾತೃತ್ವ ಮೊದಲಾದ ಮೌಲ್ಯಗಳ ನೀಡಿದ ನಮ್ಮ ಸಂವಿಧಾನ ನಮ್ಮ ದೇಶದ ಏಕತೆ ಹಾಗೂ ಹೆಮ್ಮೆಯ ಪ್ರತೀಕ ಎಂದು ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಕೆ. ಮಹೇಶ್ಚಂದ್ರ ಹೇಳಿದ್ದಾರೆ. ಕುಂದಾಪುರ ತಾ.ಆಡಳಿತ ವತಿ ಯಿಂದ ಕುಂದಾಪುರ ಗಾಂಧಿ ಮೈದಾನ ದಲ್ಲಿ 76ನೇ ವರ್ಷದ ಗಣರಾಜ್ಯೋ ತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಈ ಸಂದರ್ಭ ಕ್ರೀಡೆಯಲ್ಲಿ ಸಾಧನೆ ಗೈದ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ತಾ.ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶ್ರೇಷ್ಠ ಕೃಷಿಕ ಪ್ರಶಸ್ತಿ. ಪುರಸ್ಕೃತರ ಇಬ್ಬರು ಕೃಷಿಕರನ್ನು, ಪೌರ ಕಾರ್ಮಿಕರನ್ನು ಅಭಿನಂದಿಸಲಾಯಿತು. ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ  ಕುಂದಾಪುರಪುರ ಸಭೆಯಿಂದ ಲ್ಯಾಪ್‌ಟಾಪ್ ವಿತರಿಸಲಾಯಿತು.

ಕುಂದಾಪುರ ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ, ಉಪಾಧ್ಯಕ್ಷೆ ವನಿತಾ ಬಿಲ್ಲವ, ಕುಂದಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ ಕ್ರಾಸ್ತಾ, ಕುಂದಾಪುರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಎಚ್.ಡಿ.ಕುಲಕರ್ಣಿ, ತಾ. ಆರೋಗ್ಯ ಅಧಿಕಾರಿ ಡಾ.ಪ್ರೇಮಾನಂದ, ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಯುವ ಜನ- ಸಬಲೀಕರಣ ಇಲಾಖೆ ಅಧಿಕಾರಿ ಕುಸುಮಾಕರ ಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ಆನಂದ ໖., ಕುಂದಾಪುರ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಡಾ.ರವಿ ಕುಮಾರ್ ಹುಕ್ಕೇರಿ, ಕುಂದಾಪುರ ಪುರಸಭೆ ಸದಸ್ಯರು ಮತ್ತಿತರರಿದ್ದರು.

ಕುಂದಾಪುರ ಮಲ್ಲಿಕಾರ್ಜುನ್ ತಹಶೀಲ್ದಾರ್ ಸ್ವಾಗತಿಸಿ, ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.

 

Related Articles

error: Content is protected !!