Home » ರೋಟರಿ ಕೋಟ-ಸಾಲಿಗ್ರಾಮ ಆಶ್ರಯದಲ್ಲಿ ಜಿಲ್ಲಾ ಸಮಾವೇಶ
 

ರೋಟರಿ ಕೋಟ-ಸಾಲಿಗ್ರಾಮ ಆಶ್ರಯದಲ್ಲಿ ಜಿಲ್ಲಾ ಸಮಾವೇಶ

by Kundapur Xpress
Spread the love

ಕೋಟ : ರೋಟರಿ ಕ್ಲಬ್ ಕೋಟ-ಸಾಲಿಗ್ರಾಮ ಆಶ್ರಯದಲ್ಲಿ ಮೇ 10 ಮತ್ತು 11ರಂದು ತೆಕ್ಕಟ್ಟೆ ಪ್ರೆಸಿಡೆಂಟ್ ಹಾಲ್‌ನಲ್ಲಿ ರೋಟರಿ ಜಿಲ್ಲೆ 3182 ಇವರ ವ್ಯಾಪ್ತಿಯ ತರಬೇತಿ ಸಮಾವೇಶ ಮಾಣಿಕ್ಯ ಕಾರ್ಯಕ್ರಮ ನಡೆಯಿತು.
ಮಾಜಿ ಜಿಲ್ಲಾ ಗವರ್ನರ್ ಅಭಿನಂದನ ಶೆಟ್ಟಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ಶಿಬಿರಗಳ ಮೂಲಕ ರೋಟರಿಯಲ್ಲಿ ಇನ್ನಷ್ಟು ಸಕ್ರೀಯರಾಗಿ ಭಾಗವಹಿಸುವ ಜತೆಗೆ ಕ್ರೀಯಾಶೀಲತೆಯನ್ನು ಹೆಚ್ಚಿಸಿಕೊಳ್ಳಬಹುದು ಎಂದರು.
ಜಿಲ್ಲಾ ಗವರ್ನರ್ ಸಿ.ಎ. ದೇವಾನಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ರೋಟರಿ ಕೋಟ-ಸಾಲಿಗ್ರಾಮ ಅಧ್ಯಕ್ಷ ತಿಮ್ಮ ಪೂಜಾರಿ ಕಾರ್ಯಕ್ರಮ ಆಯೋಜನೆ ಬಗ್ಗೆ ಮಾಹಿತಿ ನೀಡಿದರು.
ನಿಯೋಜಿತ ಜಿಲ್ಲಾ ಗವರ್ನರ್ ಫಾಲಕ್ಷ ಮುಂದಿನ ಒಂದು ವರ್ಷದ ಕಾರ್ಯೋಜನೆ ಬಗ್ಗೆ, ರೋಟರಿ ಕೊಟ-ಸಾಲಿಗ್ರಾಮದ ಸದಸ್ಯ ಬಾಲಕೃಷ್ಣ ಶೆಟ್ಟಿ ರೋಟರಿಯಲ್ಲಿ ಸೇವಾವಕಾಶ ಬಗ್ಗೆ, ಮಾಜಿ ಜಿಲ್ಲಾ ಗವರ್ನರ್ ರಂಗನಾಥ ಭಟ್ ಸದಸ್ಯತ್ವ ಕಾಯ್ದುಕೊಳ್ಳುವಿಕೆ ಬಗ್ಗೆ, ಕೃಷ್ಣ ಶೆಟ್ಟಿ ರೋಟರಿ ಫೌಂಡೇಶನ್ ಮ್ಯಾಚಿಂಗ್ ಅನುದಾನ ಬಗ್ಗೆ, ಪ್ರಕಾಶ್ ಕಾರಂತ ರೋಟರಿಯ ಸಾರ್ವಜನಿಕ ಗೌರವ ಹೆಚ್ಚಿಸುವ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಕ್ಲಬ್ ವ್ಯಾಪ್ತಿಯ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಜಿಲ್ಲೆಯ 60 ರೋಟರಿ ಕ್ಲಬ್‌ನ 2025-26 ಸಾಲಿನ 750 ಮಂದಿ ಪದಾಧಿಕಾರಿಗಳು ಈ ತರಬೇತಿ ಸಮಾವೇಶದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭ ಕ್ಲಬ್‌ನ ಕಾರ್ಯದರ್ಶಿ ಚಂದ್ರ ಪೂಜಾರಿ, ಸಮಾವೇಶದ ಅಧ್ಯಕ್ಷ ರಾಜೇಂದ್ರ ಸುವರ್ಣ ಸೇರಿದಂತೆ ಎಲ್ಲ ಸದಸ್ಯರನ್ನು ಗೌರವಿಸಲಾಯಿತು.
ಸಹಾಯಕ ಗವರ್ನರ್ ಶ್ಯಾಮ ಸುಂದರ್ ನಾಯರಿ, ಸತೀಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಘಟನಾ ಪ್ರಮುಖ ರಾಜೇಂದ್ರ ಸುವರ್ಣ ಸ್ವಾಗತಿಸಿ, ಜಿ.ಎಸ್. ಪ್ರದೀಪ್ ಕಾರ್ಯಕ್ರಮ ನಿರೂಪಿಸಿ, ಜಲೇಂದ್ರ ವಂದಿಸಿದರು

 

Related Articles

error: Content is protected !!